

ಕಾಗವಾಡ: ತಾಲೂಕಿನ ಶಿರಗುಪ್ಪಿ ಗ್ರಾಪಂ 2ನೇ ಅವಗೆ ಅಧ್ಯಕ್ಷೆಯಾಗಿ ಅಕ್ಕಾತಾಯಿ ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ರಾಮಗೌಡ ಪಾಟೀಲ ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಮದ ಹಿರಿಯ ಮುಖಂಡರಾದ ಅಭಯಕುಮಾರ ಅಕಿವಾಟೆ ಹಾಗೂ ವಿಜಯಕುಮಾರ ಅಕಿವಾಟೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸತ್ಕರಿಸಿ ಮಾತನಾಡಿ, ಗ್ರಾಪಂ ಸದಸ್ಯರು, ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಗ್ರಾಮದ ಅಭಿವೃದ್ಧಿಯೇ ಮುಖ್ಯ ವಿಷಯವೆಂದು ಭಾವಿಸಿ ಪಕ್ಷಾತೀತವಾಗಿ ಶ್ರಮಿಸಬೇಕು ಎಂದರು.
ಚುನಾವಣಾಕಾರಿಯಾಗಿ ನಿಂಗಪ್ಪ ಮಸಳಿ ಕಾರ್ಯನಿರ್ವಹಿಸಿದರು. ದೀಪಕ ಪಾಟೀಲ, ಭೀಮು ಬೋಲೆ, ಗ್ರಾಪಂ ಮಾಜಿ ಅಧ್ಯಕ್ಷೆ ಅಪರ್ಣಾ ಪಾಟೀಲ, ಉಪಾಧ್ಯಕ್ಷೆ ಶೃತಿ ಕಾಂಬಳೆ, ಪಿಡಿಒ ರಾಕೇಶ ಕಾಂಬಳೆ, ಕೃಷ್ಣಾ ಐಹೊಳೆ, ಸದಸ್ಯರಾದ ವಿದ್ಯಾಧರ ಮೋರೆ, ಸರಿತಾ ಕೋಳಿ, ಗೀತಾಂಜಲಿ ಚೌಗಲೆ, ಈರಗೌಡ ಪಾಟೀಲ, ರತ್ನಾ ಕಾಂಬಳೆ, ಮಸ್ತಾನ್ ಕಣವಾಡೆ, ಅಜಿತ ಪೂಜಾರಿ, ಪಂಡಿತ ವಡ್ಡರ, ಶಾಂತಾ ಕಿತಳೆ, ಶಿಲ್ಪಾ ಶಿರಗಾಂವೆ, ಮನೋಜ ವಡ್ಡರ, ಶಶಿಕಾಂತ ಶಿರಗಾಂವೆ, ಕೌಸರ ಗೌಂಡಿ, ರಾಮು ಕಾಂಬಳೆ, ಶೋಭಾ ಗದಾಳೆ ಇತರರಿದ್ದರು.