

ಬೆಳಗಾವಿ: ತಾಲೂಕಿನ ಶಿಂಧೊಳ್ಳಿಯ ಮಹಾಲಕ್ಷಿ$್ಮ ದೇವಿಯ 9 ದಿನಗಳ ಜಾತ್ರಾ ಮಹೋತ್ಸವಕ್ಕೆ ಬುಧವಾರ ವಿಜೃಂಭಣೆಯಿಂದ ಹೊನ್ನಾಟ ಆಡುವ ಮೂಲಕ ವೈಭವದ ತೆರೆ ಎಳೆಯಲಾಯಿತು.
ಬೆಳಗ್ಗೆ ಗ್ರಾಮದ ವಿವಿಧ ಬಡಾವಣೆಗಳ ಭಕ್ತರು ಉಡಿ ತುಂಬಿದರು. ಬಳಿಕ ಗ್ರಾಮದಲ್ಲಿ ಜಾತ್ರೆ ನಿಮಿತ್ತ ಸಂಭ್ರಮ ಹೊನ್ನಾಟ ನಡೆಯಿತು. ಹೊನ್ನಾಟದಲ್ಲಿ ಪಾಲ್ಗೊಂಡ ಭಕ್ತರು ಗ್ರಾಮದ ಸೀಮೆ ತಲುಪಿದ ಬಳಿಕ ಜಾತ್ರಾ ಮಹೋತ್ಸವಕ್ಕೆ ತೆರೆಬಿದ್ದಿತು. 9 ದಿನಗಳು ಜಾತ್ರೆಯು ಸುತ್ತಲಿನ ಗ್ರಾಮಗಳ ಜನರ ಗಮನ ಸೆಳೆಯಿತು. ಜಾತ್ರೆ ನಿಮಿತ್ತ ನಡೆದ ಕುಸ್ತಿ ಪಂದ್ಯಾವಳಿ ಯುವಕರ ಮನಗೆದ್ದಿತು. ಪ್ರತಿದಿನ ನಡೆದ ನಾಟಕ ಪ್ರದರ್ಶನ ಹಾಗೂ ಸಂಗೀತ ಕಾರ್ಯಕ್ರಮ ಜನರಿಗೆ ರಸದೌತಣ ನೀಡಿದವು. ಕಮಿಟಿ ಸದಸ್ಯರು ಜಾತ್ರೆ ಯಶಸ್ಸಿಗೆ ಶ್ರಮಿಸಿದರು.
ಜಾತ್ರೆ ಕೊನೆ ದಿನವಾದ ಬುಧವಾರದ ಹೊನ್ನಾಟದಲ್ಲಿ ಬುಧವಾರ ಸತೀಶ್ ಶಹಾಪುರಕರ ಬಾಬಾಗೌಡ ಪಾಟೀಲ, ಸುರೇಶ ಮುಚ್ಚಂಡಿ, ಪಿರಾಜಿ ಅನಗೋಳಕರ, ದೇವಪ್ಪ ತುಳಾಜಿ, ಲಕ್ಷ$್ಮಣ ಅಗಸಿಮನಿ ಹಾಗೂ ಜಾತ್ರಾ ಮಹೋತ್ಸವ ಕಮಿಟಿ ಸದಸ್ಯರು ಇದ್ದರು.