ಶಿಮುಲ್ ಚುನಾವಣಾ ಕಣದಲ್ಲಿ ಪ್ರಭಾವಿಗಳು

shimul
ಶಿಮುಲ್ ನಿರ್ದೇಶಕ ಸ್ಥಾನಕ್ಕೆ ಕೆ.ಕುಮಾರ್ ಬುಧವಾರ ನಾಮಪತ್ರ ಸಲ್ಲಿಸಿದರು. ಆರ್.ಎಂ.ಮಂಜುನಾಥ ಗೌಡ, ಕೆ.ಎಲ್.ಜಗದೀಶ್ವರ್, ಕೆ.ಪಿ.ದುಗ್ಗಪ್ಪ ಗೌಡ ಇತರರಿದ್ದರು.
Published on

ಶಿವಮೊಗ್ಗ: ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲಿ ಒಂದಾಗಿರುವ ಶಿಮುಲ್ (ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ) ಆಡಳಿತ ಮಂಡಳಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮುಂದುವರಿದಿದ್ದು, ಎರಡನೇ ದಿನ ಬುಧವಾರ ಶಿಮುಲ್ ಹಾಲಿ ನಿರ್ದೇಕರು, ಅಧ್ಯಕ್ಷರು ಸೇರಿ 13 ಮಂದಿ ನಾಮಪತ್ರ ಸಲ್ಲಿಸಿದರು. ಒಟ್ಟು 14 ಜನರು ಉಮೇದುವಾರಿಕೆ ಸಲ್ಲಿಸಿದ್ದಾರೆ.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಜಿಪಂ ಮಾಜಿ ಸದಸ್ಯ ಕೆ.ಕುಮಾರ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಬಿ.ಡಿ.ಭೂಕಾಂತ್ ಉಮೇದುವಾರಿಕೆ ಸಲ್ಲಿಸಿದರು. ಶಿವಮೊಗ್ಗ, ಸಾಗರ, ದಾವಣಗೆರೆ ಮತ್ತು ಚಿತ್ರದುರ್ಗ ಸೇರಿ ಒಟ್ಟು 4 ವಿಭಾಗಗಳ 14 ನಿರ್ದೇಶಕ ಸ್ಥಾನಕ್ಕೆ ಆ. 14ರಂದು ಚುನಾವಣೆ ನಡೆಯಲಿದ್ದು, ಅಂದು ಸಂಜೆ ಫಲಿತಾಂಶ ಘೋಷಣೆಯಾಗಲಿದೆ.
ಈ ಬಾರಿ ಡಿಸಿಸಿ ಬ್ಯಾಂಕ್‌ನಲ್ಲಿ ನಡೆದ ರಾಜಕೀಯ ಮೇಲಾಟ, ಹೊಸದಾಗಿ ಕಾಣಿಸಿಕೊಂಡ ಮುಖಗಳಂತೆ ಶಿಮುಲ್‌ನಲ್ಲೂ ಅನೇಕ ಅಚ್ಚರಿ ನಿರೀಕ್ಷೆಯಿದೆ. ಮೊದಲ ಬಾರಿಗೆ ಶಿಮುಲ್ ಪ್ರವೇಶಿಸುವ ಹವಣಿಕೆಯಲ್ಲಿರುವ ಪ್ರಭಾವಿಗಳು, ಈಗಾಗಲೇ ಶಿಮುಲ್‌ನಲ್ಲಿ ಬೇರು ಬಿಟ್ಟಿರುವ ಹಳಬರ ನಡುವೆ ಹಣಾಹಣಿ ನಡೆಯುವ ಸಾಧ್ಯತೆಗಳಿವೆ.
ಬುಧವಾರ ನಾಮಪತ್ರ ಸಲ್ಲಿಸಿದವರ ವಿವರ: ಶಿವಮೊಗ್ಗ ವಿಭಾಗ-ಆರ್.ಎಂ.ಮಂಜುನಾಥ ಗೌಡ (ತೀರ್ಥಹಳ್ಳಿ), ಕೆ.ಕುಮಾರ್ (ಭದ್ರಾವತಿ), ಸಾಗರ ವಿಭಾಗ-ಬಿ.ಡಿ.ಭೂಕಾಂತ್(ಶಿಕಾರಿಪುರ), ಗಂಗಾಧರಪ್ಪ (ಸೊರಬ), ದಿವಾಕರ್, ಎಚ್.ಎಂ.ರವಿಕುಮಾರ್ (ಸಾಗರ), ದಾವಣಗೆರೆ ವಿಭಾಗ-ಕೆ.ಜಿ.ಸುರೇಶ್(ನ್ಯಾಮತಿ), ಎಚ್.ಕೆ.ಬಸಪ್ಪ(ಚನ್ನಗಿರಿ), ಚಿತ್ರದುರ್ಗ ವಿಭಾಗ-ಜಿ.ಪಿ.ಯಶವಂತರಾಜು(ಹಿರಿಯೂರು), ಪಿ.ತಿಪ್ಪೇಸ್ವಾಮಿ, ಪಿ.ಎಸ್.ಗುರುಶಾಂತಪ್ಪ (ಚಿತ್ರದುರ್ಗ), ರಮೇಶಪ್ಪ (ಹೊಸದುರ್ಗ), ಜಿ.ಆರ್.ಮಂಜುನಾಥ್(ಹೊಳಲ್ಕೆರೆ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net