ಶಿಮುಲ್ ಚುನಾವಣೆ ನಾಳೆ ‘ಸಂಜೆಯೇ ಫಲಿತಾಂಶ’

Shimul
ಮಾಚೇನಹಳ್ಳಿಯಲ್ಲಿರುವ ಶಿಮುಲ್ ಕೇಂದ್ರ ಕಚೇರಿ
Published on

ಶಿವಮೊಗ್ಗ: ಶಿಮುಲ್(ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯ ಶಿವಮೊಗ್ಗ ಹಾಲು ಒಕ್ಕೂಟ) ಆಡಳಿತ ಮಂಡಳಿ ಚುನಾವಣೆ ಆ.14ರಂದು ನಡೆಯಲಿದೆ. 14 ನಿರ್ದೇಶಕ ಸ್ಥಾನಗಳಲ್ಲಿ ಎರಡು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಘೋಷಣೆ ಬಾಕಿಯಿದೆ. ಇನ್ನುಳಿದ 12 ಸ್ಥಾನಗಳಿಗೆ ಅಂತಿಮವಾಗಿ 31 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

14ರ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನದ ಬಳಿಕ ಮತ ಎಣಿಕೆ ನಡೆಯಲಿದೆ. ರಾತ್ರಿ ವೇಳೆಗೆ ಫಲಿತಾಂಶ ಹೊರಬೀಳುವ ಸಾಧ್ಯತೆಗಳಿವೆ. ಈ ಬಾರಿ ಶಿಮುಲ್ ಚುನಾವಣಾ ಕಣ ಹಿಂದೆಂದಿಗಿಂತಲೂ ತೀವ್ರ ಹಣಾಹಣಿಯಿಂದ ಕೂಡಿದೆ. ಹೀಗಾಗಿ ಫಲಿತಾಂಶದ ಬಗ್ಗೆ ಸಹಕಾರ ಕ್ಷೇತ್ರ ಮಾತ್ರವಲ್ಲದೆ ರಾಜಕೀಯ ವಲಯದಲ್ಲೂ ತೀವ್ರ ಕುತೂಹಲ ಮೂಡಿಸಿದೆ.
ಶಿವಮೊಗ್ಗ ವಿಭಾಗದಲ್ಲಿ ತೀರ್ಥಹಳ್ಳಿ ತಾಲೂಕಿನಿಂದ ಆರ್.ಎಂ.ಮಂಜುನಾಥ ಗೌಡ, ಸಾಗರ ವಿಭಾಗದಲ್ಲಿ ಹೊಸನಗರ ತಾಲೂಕಿನಿಂದ ವಿದ್ಯಾಧರ ಮಾತ್ರ ನಾಮಪತ್ರ ಸಲ್ಲಿಸಿರುವುದರಿಂದ ಎರಡು ತಾಲೂಕುಗಳಿಗೆ ಚುನಾವಣೆ ನಡೆಯುವುದಿಲ್ಲ. ಇವರಿಬ್ಬರ ಆಯ್ಕೆಯ ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ.
ವಿಭಾಗಗಳು- ಶಿವಮೊಗ್ಗ, ಸಾಗರ, ದಾವಣಗೆರೆ, ಚಿತ್ರದುರ್ಗ
ಒಟ್ಟು ನಿರ್ದೇಶಕ ಸ್ಥಾನಗಳು- 14
ಒಟ್ಟು ಸಹಕಾರ ಸಂಘಗಳು- 1,406
ಮತದಾನಕ್ಕೆ ಅರ್ಹ ಸಂಘಗಳು- 1,171
ಮತದಾನಕ್ಕೆ ಅನರ್ಹ ಸಂಘಗಳು- 235
ಮತದಾರರ ವಿವರ
ಶಿವಮೊಗ್ಗ-264
ಸಾಗರ-256
ದಾವಣಗೆರೆ-362
ಚಿತ್ರದುರ್ಗ-289

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net