ಮೂವರು ಕಳ್ಳರ ಬಂಧನ, 11 ಬೈಕ್ ವಶ

IMG-20201111-WA0036_2
Published on

ಶಿವಮೊಗ್ಗ: ಶಿವಮೊಗ್ಗ ಮತ್ತು ಭದ್ರಾವತಿಯ ಹಲವೆಡೆ ಬೈಕ್ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಬುಧವಾರ ತುಂಗಾನಗರ ಠಾಣಾ ಪೊಲೀಸರು ಮೂವರನ್ನು ಬಂಧಿಸಿದ್ದು, 3.44 ಲಕ್ಷ ರೂ. ಮೌಲ್ಯದ 11 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಕೆಳಗಿನ ತುಂಗಾನಗರದ ತಬಾರಕ್ ಅಲಿಯಾಸ್ ತಪ್ಪಣ್ಣ(19), ರಾಗಿಗುಡ್ಡದ ಸೈಯದ್ ಸುಭಾನ್ ಅಲಿಯಾಸ್ ಸುಭಾನ್(20)ಹಾಗೂ ಟಿಪ್ಪುನಗರದ ಜುನೈದ್ ಅಲಿಯಾಸ್ ಜಿನ್ನು(19) ಬಂಧಿತರು. ಆರೋಪಿಗಳು ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು, ತುಂಗಾನಗರದಲ್ಲಿ ಎರಡು, ಶಿವಮೊಗ್ಗ ಗ್ರಾಮಾಂತರ, ವಿನೋಬನಗರ, ಕೋಟೆ, ಕುಂಸಿ ಮತ್ತು ಭದ್ರಾವತಿ ಹಳೇನಗರ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದೊಂದು ಬೈಕ್‌ಗಳನ್ನು ಕಳವು ಮಾಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್ಪಿ ಈಶ್ವರ ನಾಯ್ಕ ಮಾರ್ಗದರ್ಶನದಲ್ಲಿ ಶಿವಮೊಗ್ಗ ಗ್ರಾಮಾಂತರ ಸಿಪಿಐ ಸಂಜೀವ್‌ಕುಮಾರ್ ನೇತೃತ್ವದ ತುಂಗಾನಗರ ಪಿಎಸ್‌ಐ ಜಿ.ತಿರುಮಲೇಶ್, ಎಎಸ್‌ಐ ಜಿ.ಆರ್.ನಾರಾಯಣ್, ಮುಖ್ಯ ಪೇದೆ ಸೈಯದ್ ಇಮ್ರಾನ್, ಪೇದೆಗಳಾದ ಕೆ.ಆರ್.ರಾಜು, ಆರ್.ಗುರುನಾಯ್ಕ, ಲಂಕೇಶ್‌ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net