ಶಿವಮೊಗ್ಗ ಶಿಕ್ಷಕರ ದಿನಾಚರಣೆಯಲ್ಲಿ ಆಯನೂರು-ಈಶ್ವರಪ್ಪ ಮಾತಿನ ಜುಗಲ್‌ಬಂಧಿ

kse ayanoor
Published on

ಶಿವಮೊಗ್ಗ: ಯಾರ ಮೇಲಾದರೂ ಸೇಡು ತೀರಿಸಿಕೊಳ್ಳಬೇಕೆಂದರೆ ಅವರನ್ನು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರನ್ನಾಗಿ ಮಾಡಬೇಕು. ಈ ಖಾತೆ ವಹಿಸಿಕೊಂಡವರಿಗೆ ಬಿಪಿ, ಶುಗರ್ ಎಲ್ಲವೂ ಬರುತ್ತೆ. ಶಿಕ್ಷಕರ ಸಮಸ್ಯೆಗಳು ಅಷ್ಟೊಂದು ಪ್ರಮಾಣದಲ್ಲಿವೆ. ಕೆ.ಎಸ್.ಈಶ್ವರಪ್ಪ ಅವರನ್ನು ಶಿಕ್ಷಣ ಸಚಿವರನ್ನಾಗಿ ಮಾಡಿದರೆ ಸಮಸ್ಯೆ ಬಗೆಹರಿಯಬಹುದು ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳುತ್ತಿದ್ದಂತೆ ಸಭೆಯಲ್ಲಿ ಕರತಾಡನ ಮುಗಿಲುಮುಟ್ಟಿತ್ತು.

ಶಿವಮೊಗ್ಗದಲ್ಲಿ ಸೋಮವಾರ ನಡೆದ ಶಿಕ್ಷಕರ ದಿನಾಚರಣೆ ಇಬ್ಬರು ನಾಯಕರ ಮಾತಿನ ಜುಗಲ್‌ಬಂಧಿಗೆ ವೇದಿಕೆಯಾಗಿತ್ತು. ಇಷ್ಟಕ್ಕೇ ಸುಮ್ಮನಾಗದ ಆಯನೂರು, ಈಶ್ವರಪ್ಪ ಬುಲ್ಡೋಜರ್ ಇದ್ದಂತೆ. ಅಂತವರು ಬೇಕು. ಸುಮ್ ಸುಮ್ನೆ ಅವರ ಸಚಿವ ಸ್ಥಾನ ಹೋಗಿದೆ. ಮತ್ತೆ ಅವರು ಸಚಿವರಾಗಬಹುದು ಎಂದು ಹೇಳಿದರು.

ಬಳಿಕ ಮಾತಿಗಿಳಿದ ಕೆ.ಎಸ್.ಈಶ್ವರಪ್ಪ, ಆಯನೂರು ಮಂಜುನಾಥ್, ಆಡಳಿತ ಪಕ್ಷದ ಸದಸ್ಯರೇ? ಅಥವಾ ಪ್ರತಿಪಕ್ಷ ನಾಯಕರೇ? ಸರ್ಕಾರದ ಮೇಲೆ ಇಷ್ಟೊಂದು ವಾಗ್ದಾಳಿ ನಡೆಸುವುದೇ ಎಂದು ಪ್ರಶ್ನೆಗಳ ಮೂಲಕ ಟಾಂಗ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net