ಶಿವಮೊಗ್ಗದಲ್ಲಿ ಸಂಭ್ರಮದ ಯುವ ದಸರಾ

yuva
Published on

ಶಿವಮೊಗ್ಗ: ನಗರ ಪಾಲಿಕೆಯಿಂದ ಏರ್ಪಡಿಸಿರುವ ದಸರಾ ಉತ್ಸವದ ಅಂಗವಾಗಿ ಸೆ.26ರಿಂದ ಅ.2ರವರೆಗೆ ಯುವ ದಸರಾ ಹಮ್ಮಿಕೊಳ್ಳಲಾಗಿದೆ. ಯುವಕ, ಯುವತಿಯರಿಗೆ ಪ್ರತ್ಯೇಕವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಯುವ ದಸರಾ ಸಮಿತಿ ಅಧ್ಯಕ್ಷ ಧೀರರಾಜ್ ಹೊನ್ನವಿಲೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕುವೆಂಪು ರಂಗಮಂದಿರ, ನೆಹರೂ ಕ್ರೀಡಾಂಗಣ, ಸಿಟಿ ಸೆಂಟ್ರಲ್ ಮಾಲ್, ಫ್ರೀಡಂ ಪಾರ್ಕ್‌ನಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕೆಲವು ಜಿಲ್ಲಾ ಮಟ್ಟಕ್ಕೆ ಸೀಮಿತವಾದರೆ ಇನ್ನು ಕೆಲ ಸ್ಪರ್ಧೆಗಳನ್ನು ರಾಜ್ಯಮಟ್ಟಕ್ಕೆ ವಿಸ್ತರಿಸಲಾಗಿದೆ. ವಿಜೇತರಿಗೆ ನಗದು ಬಹುಮಾನವನ್ನೂ ನೀಡಲಾಗುತ್ತದೆ ಎಂದರು.

ಕಳೆದ ಕೆಲವು ವರ್ಷಗಳಿಂದ ದಸರಾ ಉತ್ಸವದ ಭಾಗವಾಗಿರುವ ಯುವ ದಸಾರವನ್ನು ಈ ಬಾರಿ ಮತ್ತಷ್ಟು ವೈಭವವಾಗಿ ನಡೆಸಲು ಉದ್ಧೇಶಿಸಲಾಗಿದೆ. ಇದಕ್ಕಾಗಿ ಸಕಲ ಸಿದ್ಧತೆಗಳನ್ನೂ ಪೂರ್ಣಗೊಳಿಸಲಾಗಿದೆ. ಯುವಕರನ್ನು ಆಕರ್ಷಿಸಲು ವೈವಿಧ್ಯಮಯ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಯುವ ದಸರಾ ಸಮಿತಿ ಸದಸ್ಯರಾದ ಸುವರ್ಣಾ ಶಂಕರ್, ಬಿ.ಎ.ರಮೇಶ್ ಹೆಗ್ಡೆ, ಅನಿತಾ ರವಿಶಂಕರ್, ಶಿವಕುಮಾರ್, ಇ.ವಿಶ್ವಾಸ್, ಸದಸ್ಯ ಕಾರ್ಯದರ್ಶಿ ಇ.ಹಾಲೇಶಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net