

ಶಿವಮೊಗ್ಗ: ಕಾಡುಹಂದಿ ಭೇಟೆಯಾಡಿ ತಿಂದಿದ್ದ ಆರೋಪಿಯನ್ನು ತೀರ್ಥಹಳ್ಳಿ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ವಾಟಗಾರ ಗ್ರಾಮದ ನಾಗೇಶ್ ಬಂಧಿತ. ಈತ ಹುಲಿಮನೆಯ ಕುಮಧ್ವತಿ ಮೀಸಲು ಅರಣ್ಯ ಪ್ರದೇಶದಲ್ಲಿ ಭೇಟೆಯಾಡಿದ್ದ. ಈ ಬಗ್ಗೆ ನಿಖರ ಮಾಹಿತಿ ಹಿನ್ನಲೆಯಲ್ಲಿ ವನ್ಯಜೀವಿ ವಿಭಾಗದ ಡಿಸಿಎಫ್ ಐ.ಎಂ.ನಾಗರಾಜ್ ಅವರ ನಿರ್ದೇಶನದ ಮೇರೆಗೆ ಆರ್‌ಎಫ್‌ಒ ಅಫ್ರಿನಾಜ್ ಶುಂಠಿ ಅವರ ಮಾರ್ಗದರ್ಶನದಲ್ಲಿ ಡಿಆರ್‌ಎಫ್‌ಒ ಪರಶುರಾಮ್ ಅವರು ನಾಗೇಶನನ್ನು ಬಂಧಿಸಿದ್ದಾರೆ.
ಕಾಡುಹಂದಿ ಉರುಳುಹಾಕಿ ಕೊಂದು ಅದರ ಮಾಂಸವನ್ನು ತಿಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ತೀರ್ಥಹಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅರಣ್ಯ ರಕ್ಷಕರಾದ ಪುಟ್ಟಪ್ಪ, ಪಾಂಡುರಂಗ, ಸಚಿನ್, ಸಂತೋಷ, ಚಾಲಕ ಪಾಪೇಶ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.