ಅಸಲಿ ಚಿನ್ನದ ಕರಿಮಣಿ ಸರ ಕದ್ದು ನಕಲಿ ಇಟ್ಟು ಪರಾರಿ !

download
Published on

ಶಿವಮೊಗ್ಗ: ಗ್ರಾಹಕರ ಸೋಗಿನಲ್ಲಿ ಚಿನ್ನಾಭರಣ ಮಳಿಗೆಗೆ ಬಂದ ಮಹಿಳೆ ಅಲ್ಲಿದ್ದ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು 46,200 ರೂ. ಮೌಲ್ಯದ ಚಿನ್ನದ ಕರಿಮಣಿ ಸರ ಕದ್ದು ನಕಲಿ ಕರಿಮಣಿ ಸರವಿಟ್ಟು ಪರಾರಿಯಾಗಿದ್ದಾಳೆ.

ದುರ್ಗಿಗುಡಿ ರಸ್ತೆಯ ಸುಲ್ತಾನ್ ಡೈಮಂಡ್ಸ್ ಮತ್ತು ಗೋಲ್ಡ್ ಚಿನ್ನಾಭರಣ ಮಳಿಗೆಯಲ್ಲಿ ಅಸಲಿ ಬಂಗಾರದ ಸರ ಕದ್ದು ನಕಲಿ ಬಂಗಾರದ ಸರವಿಟ್ಟು ಹೋಗಿದ್ದಾಳೆ.

ಅ.17ರಂದು ಮಧ್ಯಾಹ್ನ ಗ್ರಾಹಕರಂತೆ ಬಂದ ಮಹಿಳೆ ಕೌಂಟರ್‌ನಲ್ಲಿ ಚಿನ್ನಾಭರಣ ಖರೀದಿಸುವಂತೆ ನಟಿಸಿದ್ದಾರೆ. ಕೌಂಟರ್‌ನಲ್ಲಿದ್ದ ಉಲ್ಲಾಸ್ ಅವರ ಗಮನ ಬೇರೆಡೆ ಸೆಳೆದು 9 ಗ್ರಾಂ ಚಿನ್ನದ ಕರಿಮಣಿ ಸರ ಎಗರಿಸಿ ಅದೇ ಜಾಗದಲ್ಲಿ ನಕಲಿ ಕರಿಮಣಿ ಸರವಿಟ್ಟಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net