ಕರೊನಾ ಜಾಗೃತಿ ಮೂಡಿಸುತ್ತಿದ್ದವನೇ ಸೋಂಕಿಗೆ ಬಲಿ

28 smg sharan (corona death)
Published on

ಶಿವಮೊಗ್ಗ: ಕರೊನಾ ಸೇನಾನಿಗಳು ಮತ್ತು ಸಾರ್ವಜನಿಕರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸಿ ಜಾಗೃತಿ ಮೂಡಿಸುತ್ತಿದ್ದ ಯುವಕನೊಬ್ಬಶುಕ್ರವಾರ ಸೋಂಕಿಗೆ ಬಲಿಯಾಗಿದ್ದಾನೆ.

ನಗರದ ಸಂಸ್ಕೃತಿ ಫೌಂಡೇಶನ್ ಸಂಸ್ಥಾಪಕ ಶರಣ್(36) ಮೃತ ಯುವಕ. ಈತ ತನ್ನ ಫೌಂಡೇಶನ್‌ನಿಂದ ಕರೊನಾ ಸೇನಾನಿಗಳು ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದರು. ನಾಲ್ಕೈದು ದಿನಗಳ ಹಿಂದಷ್ಟೇ ಕರೊನಾ ಸೋಂಕು ತಗುಲಿತ್ತು.

ಪಾಟಿಸಿವ್ ಬರುತಿದ್ದಂತೆ ಟ್ರಾಯೇಜ್ ಸೆಂಟರ್ ಮೂಲಕ ಶುಭಮಂಗಳಾ ಕರೊನಾ ಕೇರ್ ಸೆಂಟರ್‌ನಲ್ಲಿರಿಸಲಾಗಿತ್ತು. ಉಸಿರಾಟದ ತೊಂದರೆ ಹೆಚ್ಚಾಗಿದ್ದರಿಂದ ಗುರುವಾರ ಸಂಜೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಶುಕ್ರವಾರ ಶರಣ್ ಮೃತಪಟ್ಟಿದ್ದಾನೆ. ಪತ್ನಿ ಎರಡು ವರ್ಷದ ಹಿಂದೆಯೇ ಮೃತಪಟ್ಟಿದ್ದು ಇದೀಗ ತಂದೆ-ತಾಯಿಯನ್ನು ಕಳೆದುಕೊಂಡಿರುವ ಎರಡೂವರೆ ವರ್ಷದ ಪುತ್ರ ಅನಾಥನಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net