ಚಲಿಸುತ್ತಿದ್ದ ಬಸ್​ನಿಂದ ಹೊರ ಜಿಗಿದ ಓರ್ವ ಯುವಕ, ಇಬ್ಬರು ಯುವತಿಯರು

Bus
Published on

ಶಿವಮೊಗ್ಗ: ಇಬ್ಬರು ಯುವತಿಯರು ಹಾಗೂ ಓರ್ವ ಯುವಕ ಚಲಿಸುತ್ತಿದ್ದ ಬಸ್​ನಿಂದ ಹೊರ ಜಿಗಿದಿರುವ ಘಟನೆ ಸಾಗರ ತಾಲೂಕಿನ ಸಿರಿವಂತೆ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಘಟನೆಯಲ್ಲಿ ಶಿಲ್ಪಾ ಹಾಗೂ ಮೇಘನಾ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಯುವಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್ಸಿನಲ್ಲಿದ್ದ ಬೆಂಕಿ ನಂದಿಸುವ ಸಿಲಿಂಡರ್​ನಿಂದ ಗ್ಯಾಸ್ ಹೊರಬಂದ ಹಿನ್ನೆಲೆಯಲ್ಲಿ ಮೂವರು ಸಹ ಭಯದಿಂದ ಬಸ್​ನಿಂದ ಹೊರಜಿಗಿದಿದ್ದಾರೆ.

ಗಾಯಾಳುಗಳು ಸಾಗರದಿಂದ ಜೋಗಕ್ಕೆ ಹೋಗುತ್ತಿದ್ದ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಗಂಭೀರ ಗಾಯಗೊಂಡಿರುವ ಯುವತಿಯರಿಬ್ಬರಿಗೂ ಸಾಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನೆ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net