ಶಿವಮೊಗ್ಗ ದಸರಾದಲ್ಲಿ 10 ಕೋಟಿ ರೂ. ಮೌಲ್ಯದ ಶ್ವಾನ ಆಕರ್ಷಣೆ

41ab0a0d7e96d01dc6ad1730a6e18b8a
Published on

ಶಿವಮೊಗ್ಗ: ಶಿವಮೊಗ್ಗ ದಸರಾ ಈ ಬಾರಿ ಹತ್ತು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಕಳೆದೆರಡು ವರ್ಷಗಳ ಬಳಿಕ ಅದ್ಧೂರಿಯಾಗಿ ನಾಡಹಬ್ಬನ್ನು ಆಚರಿಸಲಾಗುತ್ತಿದ್ದು 10 ದಿನಗಳ ದಸರಾ ಮಹೋತ್ಸವದಲ್ಲಿ ಬರೋಬ್ಬರಿ 10 ಕೋಟಿ ರೂ. ಮೌಲ್ಯದ ಶ್ವಾನವೊಂದು ಆಕರ್ಷಣೆಯ ಕೇಂದ್ರ ಬಿಂದು ಆಗಲಿದೆ.

27ರಂದು ರೈತ ದಸರಾ ಅಂಗವಾಗಿ ಮಲವಗೊಪ್ಪದಲ್ಲಿ ಕೆಸರುಗದ್ದೆ ಓಟ ಮತ್ತು ಹಗ್ಗ ಜಗ್ಗಾಟದ ಸ್ಪರ್ಧೆ ನಡೆಯಲಿದೆ. ಅಂದು ಗಾಂಧಿ ಪಾರ್ಕ್‌ನಲ್ಲಿ ಬೆಳಗ್ಗೆ 10ಕ್ಕೆ ನಡೆಯುವ ರಾಜ್ಯಮಟ್ಟದ ಶ್ವಾನ ಪ್ರದರ್ಶನದಲ್ಲಿ 10 ಕೋಟಿ ರೂ.ನ ಟಿಬೇಟಿಯನ್ ಮಸ್ತೀಫ್ ಶ್ವಾನವು ರೈತ ದಸರಾದ ವಿಶೇಷ ಆಕರ್ಷಣೆ ಆಗಿದೆ.

ಸೆ.26ರಿಂದ ಅ.5ರವರೆಗೆ ದಸರಾ ಮಹೋತ್ಸವ ನಡೆಯಲಿದ್ದು 27ರಿಂದ ಅ.15ರವರೆಗೆ ರಾಜ್ಯಮಟ್ಟದ ಹಾಸ್ಯ ನಾಟಕ ರಚನಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಸೆ.28ರಂದು ಪರಿಸರ ದಸರಾ ಅಂಗವಾಗಿ ಶಾಲಾ ಮಕ್ಕಳಿಗೆ ಕ್ವಿಜ್ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆ, ದಸರಾ 5-ಕೆ ಮ್ಯಾರಥಾನ್, ಕುವೆಂಪು ರಂಗಮಂದಿರದಲ್ಲಿ ಕಲಾ ದಸರಾ ಹಮ್ಮಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net