ಧರ್ಮದ ಆಧಾರದ ಮೇಲೆ ಪಿಎಫ್‌ಐ ನಿಷೇಧಿಸಿಲ್ಲ: ಆರಗ ಜ್ಞಾನೇಂದ್ರ

Araga Gnanendra
Published on

ಶಿವಮೊಗ್ಗ: ಪಿಎಫ್‌ಐ ಸಂಘಟನೆಯನ್ನು ಧರ್ಮದ ಆಧಾರದ ಮೇಲೆ ನಿಷೇಧಿಸಿಲ್ಲ. ಯುವಕರಿಗೆ ದೇಶದ್ರೋಹಿ ಕೃತ್ಯಗಳಿಗೆ ಕುಮ್ಮಕ್ಕು

ಕೊಡಲಾಗುತ್ತಿದೆ ಎನ್ನುವ ಕಾರಣಕ್ಕೆ ನಿಷೇಧಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರ ಅಪೇಕ್ಷೆಯಂತೆ ಪಿಎಫ್‌ಐ ಸಂಘಟನೆ

ನಿಷೇಧಿಸಲಾಗಿದೆ. ಮತ್ತೊಂದು ಸಂಘಟನೆ ಈ ರೀತಿ ಹುಟ್ಟಿಕೊಳ್ಳಬಹುದು. ಆದರೆ ಪೊಲೀಸರು ಈ ಎಲ್ಲ ಸಂಘಟನೆಗಳ

ಚಲನವಲನದ ಮೇಲೆ ನಿಗಾ ಇಡಲಿದೆ ಎಂದರು.

ಸಿದ್ದರಾಮಯ್ಯ ಸಿಎಂ ಇದ್ದಾಗ ಪಿಎಫ್‌ಐ ಮೇಲಿನ ಕೇಸ್‌ಗಳನ್ನು ಹಿಂಪಡೆಯಲಾಗಿತ್ತು. ಸಿದ್ದರಾಮಯ್ಯ ಮತ ಬ್ಯಾಂಕ್‌ಗಾಗಿ

ಆರ್‌ಎಸ್‌ಎಸ್‌ನ್ನು ನಿಷೇಧಿಸಿ ಎನ್ನುತ್ತಿದ್ದಾರೆ. ಈ ನಡವಳಿಕೆ ಸರಿಯಲ್ಲ. ಯಾವ ಯಾವ ಸಂಘಟನೆಗಳು ಭಯೋತ್ಪಾದನೆ ಕೃತ್ಯದಲ್ಲಿ

ತೊಡಗುತ್ತವೆಯೋ ಅಂತಹ ಸಂಘಟನೆಗಳನ್ನು ಬ್ಯಾನ್ ಮಾಡಲಾಗುತ್ತದೆ. ಎಸ್‌ಡಿಪಿಐ ರಾಜಕಾರಣದಲ್ಲಿದ್ದು ದೇಶ ವಿರೋಧಿ

ಚಟುವಟಿಕೆಗಳಲ್ಲಿ ಗುರುತಿಸಿಕೊಂಡು ಕೋಮುಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡಿದರೆ ಸರ್ಕಾರ ಕ್ರಮಕ್ಕೆ ಮುಂದಾಗಲಿದೆ

ಎಂದು ಎಚ್ಚರಿಕೆ ನೀಡಿದರು.

ಶಿವಮೊಗ್ಗದಲ್ಲಿ ಎಫ್‌ಐಆರ್ ಹಾಕದಿದ್ದರೆ ಯಾವುದೇ ರಾಷ್ಟ್ರವಿರೋಧಿ ಕೃತ್ಯಗಳು ಹೊರಗೆ ಬರುತ್ತಿರಲಿಲ್ಲ. ಪಿಎಫ್‌ಐ ಬ್ಯಾನ್‌ನಿಂದ

ಪೊಲೀಸರು ಅಲರ್ಟ್ ಆಗಿದ್ದಾರೆ. ಪ್ರಕರಣವನ್ನು ಲಘುವಾಗಿ ತೆಗೆದುಕೊಂಡಿಲ್ಲ. ಮತ್ತೆ ಇಂತಹ ಕೃತ್ಯ ಕಂಡುಬಂದರೆ ಕಠಿಣ

ಕ್ರಮವಾಗುತ್ತದೆ ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net