ಶಿವಮೊಗ್ಗದಲ್ಲಿ ರಾತ್ರೋರಾತ್ರಿ ಫ್ಲೆಕ್ಸ್ ತೆರವು

15 smg 30
Published on

ಶಿವಮೊಗ್ಗ: ವೀರ ಸಾವರ್ಕರ್ ಫ್ಲೆಕ್ಸ್ ವಿವಾದದ ಬೆನ್ನಲ್ಲೇ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿದ್ದ ಎಲ್ಲ ಮಾದರಿಯ ಸಾವಿರಾರು ಫ್ಲೆಕ್ಸ್, ಬಂಟಿಂಗ್ಸ್, ಬ್ಯಾನರ್‌ಗಳನ್ನೂ ರಾತ್ರೋರಾತ್ರಿ ತೆರವುಗೊಳಿಸಲಾಯಿತು.

ರಾತ್ರಿ 7ರಿಂದ ಬೆಳಗಿನ ಜಾವ 3ರವರೆಗೆ 150 ಪಾಲಿಕೆ ಸಿಬ್ಬಂದಿ ನಾಲ್ಕು ಲಾರಿ, ಮೂರು ಟ್ರಾಕ್ಟರ್ ಮತ್ತು ಮೂರು ಜೆಸಿಬಿಗಳನ್ನು ಬಳಸಿ ತೆರವುಗೊಳಿಸಲಾಗಿದೆ. ಆಯುಕ್ತ ಕೆ.ಮಾಯಣ್ಣಗೌಡ ಅವರೇ ಖುದ್ದಾಗಿ ಸ್ಥಳದಲ್ಲಿದ್ದು ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದರು.

ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಾಕಿದ್ದರಿಂದ ಫ್ಲೆಕ್ಸ್‌ಗಳನ್ನು ಬಿಟ್ಟಿದ್ದೆವು. ಸ್ವಾತಂತ್ರ್ಯೋತ್ಸವ ಮುಗಿದ ಹಿನ್ನಲೆಯಲ್ಲಿ ಎಲ್ಲ ಮಾದರಿಯ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್‌ಗಳನ್ನು ತೆರವುಗೊಳಿಸಲಾಗಿದೆ ಎಂದು ಆಯುಕ್ತ ಕೆ.ಮಾಯಣ್ಣಗೌಡ ‘ವಿಜಯವಾಣಿ’ಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net