ಆನ್‌ಲೈನ್‌ನಲ್ಲಿ ಇಬ್ಬರಿಗೆ 91 ಸಾವಿರ ರೂ. ವಂಚನೆ

cbyer station
Published on

ಶಿವಮೊಗ್ಗ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಹಿಳೆ ಸೇರಿ ಇಬ್ಬರು ಆನ್‌ಲೈನ್ ವಂಚನೆ ಪ್ರಕರಣಕ್ಕೆ ಸಿಲುಕಿದ್ದು ಒಟ್ಟು 91,010 ರೂ. ಕಳೆದುಕೊಂಡಿದ್ದಾರೆ.

ನಗರದ ರೂಪಾ ಅವರ ಮೊಬೈಲ್‌ಗೆ ಪಿಎಂ ಬಿಜಿನೆಸ್ ಲೋನ್ ಬಗ್ಗೆ ಮಾಹಿತಿ ಬಂದಿತ್ತು. ಮೇಸೇಜ್‌ನಲ್ಲಿದ್ದ ಲಿಂಕ್ ಒತ್ತಿದ ರೂಪಾ ಮೊಬೈಲ್‌ಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ ವಾಟ್ಸ್‌ಆ್ಯಪ್ ನಂಬರ್ ಪಡೆದು ಅರ್ಜಿ ಫಾರ್ಮ್ ಕಳುಹಿಸಿದ್ದ. ಅರ್ಜಿ ತುಂಬಿ ಕಳುಹಿಸಿದ್ದ ರೂಪಾಳಿಗೆ ಸೇವಾ ಶುಲ್ಕ, ಖಾತೆ ವರ್ಗಾವಣೆ ಸೇರಿ 47,450 ರೂ. ಖಾತೆಗೆ ಹಾಕಿಸಿಕೊಂಡಿದ್ದ. ಮತ್ತೆ 43 ಸಾವಿರ ರೂ. ಕೇಳಿದಾಗ ಅನುಮಾನಗೊಂಡ ರೂಪಾ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ನಂದಕುಮಾರ್ ಅವರಿಗೆ ಬ್ಯಾಂಕ್ ಮ್ಯಾನೇಜರ್ ಹೆಸರಲ್ಲಿ ಕರೆ ಮಾಡಿದ್ದ ವ್ಯಕ್ತಿ, ಡೆಬಿಟ್ ಕಾರ್ಡ್ ಅವಧಿ ಮುಗಿದಿದೆ. ಅದರಲ್ಲಿರುವ ಹಣವನ್ನು ಬೇರೆ ಬ್ಯಾಂಕ್‌ಗೆ ವರ್ಗಾಯಿಸಿಕೊಡುತ್ತೇನೆ ಎಂದು ನಂಬಿಸಿ ಒಟಿಪಿ ಪಡೆದಿದ್ದ. ನಂದಕುಮಾರ್ ಖಾತೆಯಿಂದ ಹಂತ ಹಂತವಾಗಿ 43,560 ರೂ. ಹಣ ಮೊಬೈಲ್ ಸ್ವಿಚ್‌ಆಫ್ ಮಾಡಿಕೊಂಡಿದ್ದಾನೆ. ವಂಚನೆಗೊಳಗಾದ ನಂದಕುಮಾರ್ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net