ತೋಟದಲ್ಲಿ ಮುಖಕ್ಕೆ ಕಾರದಪುಡಿ ಎರಚಿ ಹಲ್ಲೆ ನಡೆಸಿದ ದುಷ್ಕರ್ಮಿಗಳು

tunga nagar police station
Published on

ಶಿವಮೊಗ್ಗ: ತಾಲೂಕಿನ ಮತ್ತೂರು ರಸ್ತೆಯ ಮಳಲಿಕೊಪ್ಪದ ತೋಟದಲ್ಲಿ ರಾತ್ರಿ ವ್ಯಕ್ತಿಯ ಮುಖಕ್ಕೆ ಖಾರದ ಪುಡಿ ಹಾಕಿ ಹಲ್ಲೆ ನಡೆಸಲಾಗಿದೆ.

ಮಳಲಿಕೊಪ್ಪದ ಅರುಣ್‌ಕುಮಾರ್ (38) ಹಲ್ಲೆಗೆ ಒಳಗಾದವರು. ಅರುಣ್‌ಕುಮಾರ್ ರಾತ್ರಿ ತೋಟಕ್ಕೆ ಹೋಗಿದ್ದಾಗ ದುಷ್ಕರ್ಮಿಗಳು ಮುಖಕ್ಕೆ ಟಾರ್ಚ್ ಬಿಟ್ಟಿದ್ದಾರೆ. ಬಳಿಕ ಖಾರದ ಪುಡಿ ಎರಚಿ ದೊಣ್ಣೆಯಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಹಲ್ಲೆಗೊಳಗಾದ ಅರುಣ್‌ಕುಮಾರ್ ತೋಟದಲ್ಲಿ ಕಿರುಚಾಡಿದಾಗ ಅಕ್ಕಪಕ್ಕದವರು ಬಂದಿದ್ದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಹಲ್ಲೆ ಯಾವ ಕಾರಣಕ್ಕೆ ನಡೆದಿದೆ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ. ತುಂಗಾನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net