ಶಿವಮೊಗ್ಗದಲ್ಲಿ ಮಧು ಬಂಗಾರಪ್ಪಗೆ ಭವ್ಯ ಸ್ವಾಗತ

24 smg 8a
Published on

ಶಿವಮೊಗ: ಕೆಪಿಸಿಸಿ ಉಪಾಧ್ಯಕ್ಷ, ಪ್ರಣಾಳಿಕೆ, ನೀತಿ ಮತ್ತು ದೂರದೃಷ್ಟಿ ಸಮಿತಿ 2023ರ ಉಪಾಧ್ಯಕ್ಷ ಹಾಗೂ ನೂತನವಾಗಿ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಆಧ್ಯಕ್ಷ ಮಧು ಬಂಗಾರಪ್ಪ ಅವರಿಗೆ ಶನಿವಾರ ಭವ್ಯ ಸ್ವಾಗತ ಕೋರಲಾಯಿತು.

ಬೆಂಗಳೂರಿನಿಂದ ಭದ್ರಾವತಿ ಮಾರ್ಗವಾಗಿ ಬಂದ ಅವರನ್ನು ಎಂಆರ್‌ಎಸ್ ವೃತ್ತದಿಂದ ಜಿಲ್ಲಾ ಕಾಂಗ್ರೆಸ್ ಕಚೇರಿವರೆಗೆ ಬೈಕ್ ರ‌್ಯಾಲಿ ಮೂಲಕ ಕರೆತರಲಾಯಿತು. ಹೊಳೆಬಸ್ ನಿಲ್ದಾಣದ ಬಳಿ ಕೆಪಿಸಿಸಿ ಕಾರ್ಯದರ್ಶಿ ಕೆ.ದೇವೇಂದ್ರಪ್ಪ, ಮಹಾನಗರ ಪಾಲಿಕೆ ಸದಸ್ಯ ಎಚ್.ಸಿ.ಯೋಗೀಶ್ ನೇತೃತ್ವದಲ್ಲಿ 350 ಕೆಜಿಯ ಬೃಹತ್ ಸೇಂಬು ಹಣ್ಣಿನ ಹಾರ ಹಾಕಿ ಸ್ವಾಗತಿಸಲಾಯಿತು.

ಮುಖಂಡರಾದ ಕಾಶಿ ವಿಶ್ವನಾಥ್, ರೇಖಾ ರಂಗನಾಥ್, ಯಮುನಾ ರಂಗೇಗೌಡ, ಮಂಜುಳಾ ಶಿವಣ್ಣ, ರಾಜಶೇಖರ್, ವಿನಯ ತಂಡ್ಲೆ, ಎಚ್.ಎಸ್.ಬಾಲಾಜಿ, ಕವಿತಾ ರಾಘವೇಂದ್ರ, ಮಾರ್ಟಿನ್ ಮತ್ತಿತರರು ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ಬೈಕ್ ರ‌್ಯಾಲಿಯಿಂದ ಟ್ರಾಫಿಕ್ ಜಾಮ್: ಮಧು ಬಂಗಾರಪ್ಪ ಅವರನ್ನು ಸ್ವಾಗತಿಸಲು ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಬೈಕ್ ರ‌್ಯಾಲಿಯಿಂದ ನಗರದ ಹಲವೆಡೆ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪ್ರಮುಖ ರಸ್ತೆಗಳಾದ ಬಿ.ಎಚ್.ರಸ್ತೆ, ನೆಹರು ರಸ್ತೆ, ಬಾಲರಾಜ್ ಅರಸ್ ರಸ್ತೆಯಲ್ಲಿ ವಾಹನ ಸವಾರರು ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದರಯ. ಇದರಿಂದ ಆ್ಯಂಬುಲೆನ್ಸ್‌ಗಳು ಕೂಡ ರೋಗಿಗಳನ್ನು ಕರೆದೊಯ್ಯಲು ಪರದಾಡುವಂತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net