ಶಿವಮೊಗ್ಗ ಲೋಕಸಭಾ ಕ್ಷೇತ್ರ, ಕೋರ್ಟ್ ಮೋರೆ

ex dcm K S Eswarappa
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
Published on

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನನ್ನ ನಕಲಿ ವಿಡಿಯೋ, ಸುದ್ದಿಗಳನ್ನು ಹರಿಬಿಟ್ಟಿರುವ ವಿಚಾರ ಸಂಬಂಧ ಈಗಾಗಲೇ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದೇನೆ. ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವುದಾಗಿ ವರದಿ ನೀಡಿದ್ದಾರೆ. ಅಲ್ಲಿಂದ ಕ್ರಮ ಕೈಗೊಳ್ಳುವ ವಿಶ್ವಾಸವಿದೆ. ಒಂದು ವೇಳೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದ ಮೆಟ್ಟಿಲೇರುತ್ತೇನೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ಮತದಾನಕ್ಕೂ ಮುಂಚೆ ಸಾಮಾಜಿಕ ಜಾಲತಾಣದಲ್ಲಿ ನಾನು ಚುನಾವಣಾ ಕಣದಿಂದ ಹಿಂದೆ ಸರಿದಿದ್ದೇನೆಂಬ ವಿಡಿಯೋ ಹರಿಬಿಟ್ಟಿದ್ದರು. ಇದರಿಂದ ನನಗೆ ಅಪಾರ ಪ್ರಮಾಣದ ಮತಗಳು ಸಿಗದಂತಾಗಿದೆ. ಅದರ ವಿರುದ್ಧ ಚುನಾವಣೆಗೆ ದೂರು ಕೊಟ್ಟರೆ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯ ಚುನಾವಣಾ ಆಯೋಗ ಮಾತ್ರ ಕೇಂದ್ರ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಿ ಸುಮ್ಮನಿದೆ. ಬಿಜೆಪಿ ಷಡ್ಯಂತ್ರಕ್ಕೆ ಉತ್ತರ ಕೊಡಬೇಕಿತ್ತು. ಉತ್ತರ ಸಿಗದಿದ್ದರೆ ಕೋರ್ಟ್ ಮೆಟ್ಟಿಲೇರುವುದು ಅನಿವಾರ್ಯ ಆಗಲಿದೆ ಎಂದರು.
ರಾಜ್ಯದಲ್ಲಿ ಪೊಲೀಸರ ವೈಫಲ್ಯ: ಶಿವಮೊಗ್ಗ ಸೇರಿ ಇಡೀ ರಾಜ್ಯದಲ್ಲಿ ಪೊಲೀಸರ ವೈಫಲ್ಯ ಎದ್ದುಕಾಣುತ್ತಿದೆ. ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಪರ ಇರುವುದು ಸ್ಪಷ್ಟವಾಗಿದೆ. ಚನ್ನಗಿರಿ ಮತ್ತು ಮಂಗಳೂರಿನಂತಹ ಘಟನೆಗಳು ಉದಾಹರಣೆಯಾಗಿವೆ. ಶಿವಮೊಗ್ಗದಲ್ಲೂ ಇಂತಹ ಘಟನೆ ಮರುಕಳಿಸುತ್ತಿದೆ. ಲವ್ ಜಿಹಾದ್‌ನಂತಹ ಘಟನೆಗಳು ನಡೆಯುತ್ತಲೇ ಇವೆ. ಕಾಂಗ್ರೆಸ್ ಸರ್ಕಾರವನ್ನು ನಾವು ನಂಬುವಂತಿಲ್ಲ. ಹಾಗಾಗಿ ಇನ್ಮುಂದೆ ಹಿಂದು ಹೆಣ್ಣುಮಕ್ಕಳಿಗೆ ಹಿಂದುಗಳೇ ರಕ್ಷಣೆ ಕೊಡಬೇಕಿದೆ ಎಂದು ಕೆ.ಎಸ್.ಈಶ್ವರಪ್ಪ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net