ಶಿವಮೊಗ್ಗದಲ್ಲಿ ತಡರಾತ್ರಿವರೆಗೆ ಮದ್ಯ ಮಾರಾಟ ಸ್ಥಗಿತ

WhatsApp Image 2022-08-16 at 4.41.38 PM
Published on

ಶಿವಮೊಗ್ಗ: ಶಿವಮೊಗ್ಗ ಮತ್ತು ಭದ್ರಾವತಿ ನಗರಗಳಲ್ಲಿ ಮದ್ಯ ಮಾರಾಟ ಮಂಗಳವಾರವೂ ಸ್ಥಗಿತಗೊಂಡಿತ್ತು. ಫ್ಲೆಕ್ಸ್ ವಿವಾದದ ಬೆನ್ನಲ್ಲೇ ಸೋಮವಾರ ನಗರಾದ್ಯಂತ ಎಲ್ಲ ಮಾದರಿ ಮದ್ಯದಂಗಡಿ ಮುಚ್ಚಲಾಗಿತ್ತು. ಭದ್ರಾವತಿಯಲ್ಲಿ ಯುವಕನ ಮೇಲೆ ಹಲ್ಲೆ ನಡೆದ ಬಳಿಕ ಮಂಗಳವಾರ ರಾತ್ರಿ 12ರವರೆಗೆ ಮದ್ಯ ಮಾರಾಟ ನಿಷೇಧ ಮಾಡಿ ಡಿಸಿ ಡಾ. ಸೆಲ್ವಮಣಿ ಆದೇಶಿಸಿದರು.

ಅದರ ಬೆನ್ನಲ್ಲೇ ಅಬಕಾರಿ ಡಿಸಿ ಕ್ಯಾಪ್ಟನ್ ಅಜಿತ್‌ಕುಮಾರ್ ನೇತೃತ್ವದಲ್ಲಿ ಶಿವಮೊಗ್ಗ ಉಪವಿಭಾಗ, ಶಿವಮೊಗ್ಗ ವಲಯ 12, ಜಿಲ್ಲಾ ವಿಚಕ್ಷಣ ದಳ, ಭದ್ರಾವತಿ ವಲಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಶಿವಮೊಗ್ಗ, ಭದ್ರಾವತಿ ನಗರ ವ್ಯಾಪ್ತಿಯ ಎಲ್ಲ ಮಾದರಿಯ ಸನ್ನದುಗಳನ್ನು ಮುಚ್ಚಿಸಿದರು. ಉಪವಿಭಾಗದ ಉಪ ಅಧೀಕ್ಷಕ ನೌಶದ್ ಖಾನ್, ನಿರೀಕ್ಷಕರಾದ ಶೀಲಾ ಧಾರಜ್ಕರ್, ಎನ್.ಹಾಲಾನಾಯ್ಕ್, ಭೂಪತಿ, ಜಿ.ಬಿ.ಮಂಜುನಾಥ್, ಸುನೀಲ್ ಕಲ್ಲೂರ್ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net