ಗ್ರಾಹಕನ ಸೋಗಿನಲ್ಲಿ ಬಂದು ಐಫೋನ್ ಎಗರಿಸಿದ !

iphone
Published on

ಶಿವಮೊಗ್ಗ: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿರುವ ರಿಲೆಯನ್ಸ್ ಡಿಜಿಟಲ್ ಶೋ ರೂಮ್‌ನಲ್ಲಿ ಗ್ರಾಹಕನ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ಬರೋಬ್ಬರಿ 1.40 ಲಕ್ಷ ರೂ. ಮೌಲ್ಯದ ಎರಡು ಐಫೋನ್ ಗಳನ್ನು ಎಗರಿಸಿ ಪರಾರಿಯಾಗಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಂಗಳವಾರ ಸಂಜೆ ಬಂದ ವ್ಯಕ್ತಿ ಮಳಿಗೆಯನ್ನು ಸುತ್ತಾಡಿದ್ದಾನೆ. ವಿವಿಧ ಬಗೆಯ ಮೊಬೈಲ್‌ಗಳನ್ನೂ ಪರಿಶೀಲಿಸಿದ್ದಾನೆ. ಬಳಿಕ ಆ್ಯಪಲ್-12 ಮಾದರಿಯ ಎರಡು ಮೊಬೈಲ್‌ಗಳನ್ನು ಜೇಬಿಗಿಳಿಸಿ ಕಾಲ್ಕಿತ್ತಿದ್ದಾನೆ.

ಬುಧವಾರ ಸ್ಟಾಕ್ ಪರಿಶೀಲಿಸಿದಾಗ ಆ್ಯಪಲ್-12 ಮಾಡೆಲ್‌ನ ಮೊಬೈಲ್‌ಗಳು ಇಲ್ಲದಿರುವುದು ಸಿಬ್ಬಂದಿ ಗಮನಕ್ಕೆ ಬಂದಿದ್ದು ತಕ್ಷಣವೇ ಅಂಗಡಿಯ ಸಿಸಿ ಟಿವಿ ಪರಿಶೀಲಿಸಿದಾಗ ಗ್ರಾಹಕನಾಗಿ ಬಂದ ವ್ಯಕ್ತಿ ಕಪ್ಪು ಮತ್ತು ಪರ್ಪಲ್ ಬಣ್ಣದ ಐಫೋನ್‌ಗಳನ್ನು ಕಳವು ಮಾಡಿರುವುದು ಸೆರೆಯಾಗಿದೆ. ಈ ಬಗ್ಗೆ ಮಳಿಗೆಯ ಸಿಬ್ಬಂದಿ ಚರಣ್ ಕಾಸ್ಕಾಡಾ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net