ಬೀರುವಿನಲ್ಲಿದ್ದ ರೂ. 2.25 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

gold-thief_thinkstock_759
Published on

ಶಿವಮೊಗ್ಗ: ಮನೆ ಬೀಗವನ್ನು ಮೀಟರ್ ಬೋರ್ಡ್, ಹೂವಿನ ಕುಂಡ ಅಥವಾ ಮ್ಯಾಟ್ ಕೆಳಗಡೆ ಇಡುವ ಅಭ್ಯಾಸ ನಿಮಗಿದೆಯಾ ?. ಹುಷಾರ್.. ನಿಮ್ಮ ಮನೆಯಲ್ಲಿದ್ದ ಚಿನ್ನಾಭರಣ ಅಥವಾ ಹಣ ಇದರಿಂದ ಕಳವು ಆಗುವ ಸಾಧ್ಯತೆ ಹೆಚ್ಚಿದೆ.

ಹೌದು, ಶಿವಮೊಗ್ಗದ ಬೊಮ್ಮನಕಟ್ಟೆಯಲ್ಲಿ ಇಂತಹದೊಂದು ಪ್ರಕರಣ ನಡೆದಿದೆ. ಮನೆ ಬಾಗಿಲಿಗೆ ಬೀಗ ಹಾಕಿ ಮೀಟರ್ ಬೋರ್ಡ್‌ನಲ್ಲಿ ಕೀ ಇಟ್ಟು ಹೋಗಿದ್ದು 2.25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವುದು ಬೆಳಕಿಗೆ ಬಂದಿದೆ.

ಬೊಮ್ಮನಕಟ್ಟೆ ಎ ಬ್ಲಾಕ್‌ನ ಪಾರ್ವತಮ್ಮ ಅವರ ಮನೆಯಲ್ಲಿ ಚಿನ್ನಾಭರಣ ಕಳವಾಗಿದೆ. ಪಾರ್ವತಮ್ಮ ಅವರು ಪುತ್ರನೊಂದಿಗೆ ಎ ಬ್ಲಾಕ್‌ನಲ್ಲಿ ವಾಸವಾಗಿದ್ದು ಜೀವನೋಪಾಯಕ್ಕಾಗಿ ಕ್ಯಾಂಟೀನ್ ನಡೆಸಿಕೊಂಡಿದ್ದಾರೆ. ಎಂದಿನಂತೆ ಪಾರ್ವತಮ್ಮ ಅವರು ಕ್ಯಾಂಟೀನ್‌ಗೆ ತೆರಳಿದ್ದರು. ಮನೆಯಲ್ಲಿದ್ದ ಪುತ್ರ ಕಾರ್ತಿಕ್ ಬಾಗಿಲಿಗೆ ಬೀಗ ಹಾಕಿಕೊಂಡು ಮೀಟರ್ ಬೋರ್ಡ್‌ನಲ್ಲಿ ಕೀ ಇಟ್ಟು ಹೊರಗಡೆ ಹೋಗಿದ್ದ.

ಇದನ್ನು ಗಮನಿಸಿದ್ದ ಕಳ್ಳರು ಮನೆ ಬೀಗ ತೆಗೆದು ಬೀರುವಿನಲ್ಲಿದ್ದ ಬಂಗಾರದ ಲಾಂಗ್ ಚೈನ್, ಬ್ರಾಸ್ಲೈಟ್, ಎರಡು ಉಂಗುರ, ಒಂದು ಜತೆ ಮಾಟೀಲ್ ಮತ್ತು ಪ್ಲೇಟ್, ಪೆಂಡೆಂಟ್, ಮುರಾ ಸೇರಿ 62 ಗ್ರಾಂ ಚಿನ್ನಾಭರಣ ಕಳವು ಮಾಡಲಾಗಿದೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net