ಶಿವಮೊಗ್ಗ: ನಗರದ ಅಶ್ವತ್ಥನಗರದಲ್ಲಿ ಶನಿವಾರ ರಾತ್ರಿ ನವ ವಿವಾಹಿತೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಶ್ವತ್ಥನಗರದ ನವ್ಯಶ್ರೀ (23) ಆತ್ಮಹತ್ಯೆ ಮಾಡಿಕೊಂಡವರು. ನಗರದ ಹೊಮ್ಮರಡಿ ಆಸ್ಪತ್ರೆಯ ವೈದ್ಯೆ ಡಾ. ಜಯಶ್ರೀ ಹೊಮ್ಮರಡಿ ಅವರ ಸೊಸೆಯಾಗಿದ್ದು ಆರು ತಿಂಗಳ ಹಿಂದಷ್ಟೇ ಡಾ. ಜಯಶ್ರೀ ಅವರ ಪುತ್ರ ಆಕಾಶ್ ಜತೆ ಚಿಕ್ಕಮಗಳೂರಿನ ದೇವನಹಳ್ಳಿಯ ನವ್ಯಶ್ರೀ ಅವರ ವಿವಾಹವಾಗಿತ್ತು.
ಶನಿವಾರ ಸಂಜೆ ಅಕ್ಕಪಕ್ಕದ ಮನೆಯಲ್ಲಿ ತುಳಸಿ ಪೂಜೆಯಲ್ಲಿ ಪಾಲ್ಗೊಂಡು ಅರಿಶಿಣ ಕುಂಕುಮ ಸೀಕರಿಸಿ ಮನೆಗೆ ಮರಳಿದ್ದರು. ಬಳಿಕ ರಾತ್ರಿ ಕಾರ್ ಶೆಡ್‌ನಲ್ಲಿ ನೇಣು ಬಿಗಿದುಕೊಂಡಿದ್ದು ಭಾನುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಕೌಂಟುಬಿಕ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಿದರು.
ಆತ್ಮಹತ್ಯೆಗೂ ಮುನ್ನ ರೀಲ್ಸ್ ?: ನವ್ಯಶ್ರೀ ಆತ್ಮಹತ್ಯೆಗೂ ಮುನ್ನ ಹಿಂದಿ ಹಾಡಿಗೆ ರೀಲ್ಸ್ ಮಾಡಿ ಇನ್‌ಸ್ಟಾಗ್ರಾಮ್ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಎಂಇಎಸ್ ಕಾಲೇಜಿನಲ್ಲಿ ಎಂಕಾಂ ಪದವಿ ಪಡೆದಿದ್ದ ನವ್ಯಶ್ರೀ, ಆಕಾಶ್‌ನನ್ನು ವರಿಸಿದ್ದಳು. ಆಕಾಶ್ ಕೊಪ್ಪದಲ್ಲಿರುವ ಅಡಕೆ ತೋಟ ನೋಡಿಕೊಂಡಿದ್ದರು ಎನ್ನಲಾಗಿದೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.