ಶಿವಮೊಗ್ಗದಲ್ಲಿ ಗಂಧದಗುಡಿ ವೀಕ್ಷಿಸಿದ ಬಿಎಸ್‌ವೈ

3 smg 13
Published on

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಬಿಡುವು ಮಾಡಿಕೊಂಡು ಇಲ್ಲಿನ ಸಿಟಿ ಸೆಂಟ್ರಲ್ ಮಾಲ್‌ನಲ್ಲಿರುವ ಭಾರತ್ ಸಿನಿಮಾಸ್‌ನಲ್ಲಿ ಪವರ್‌ಸ್ಟಾರ್ ಪುನೀತ್‌ರಾಜಕುಮಾರ್ ಅವರ ಸಾಕ್ಷ್ಯಚಿತ್ರ ಗಂಧದಗುಡಿಯನ್ನು ವೀಕ್ಷಿಸಿದರು. ಪುತ್ರ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಸೊಸೆ ತೇಜಸ್ವಿನಿ ರಾಘವೇಂದ್ರ ಅವರೊಂದಿಗೆ ಸಾಕ್ಷ್ಯಚಿತ್ರ ವೀಕ್ಷಿಸಿದರು. ಬಿ.ಎಸ್.ಯಡಿಯೂಪ್ಪ ಅವರು ಮಾಲ್‌ಗೆ ಆಗಮಿಸುತ್ತಿದ್ದಂತೆ ಮುಖ್ಯದ್ವಾರದಲ್ಲಿ ಎದುರಾದ ಪುಟಾಣಿಯ ಕೈಕುಲುಕಿದರು. ಬಳಿಕ ಮಾಲ್ ಸಿಬ್ಬಂದಿ ಸೇರಿದಂತೆ ಗಂಧದ ಗುಡಿ ಸಾಕ್ಷ್ಯಚಿತ್ರ ವೀಕ್ಷಣೆಗೆ ಬಂದಿದ್ದ ಅಪ್ಪು ಅಭಿಮಾನಿಗಳು ಯಡಿಯೂರಪ್ಪ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.

ಬೆಳಗ್ಗೆ ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಆಗಮಿಸುವ ವೇಳೆ ಜೆಎನ್‌ಎನ್‌ಸಿ ಕಾಲೇಜು ಬಳಿ ವಿದ್ಯಾರ್ಥಿನಿಯರ ಕೋರಿಕೆ ಮೇರೆಗೆ ಅವರೊಂದಿಗೆ ಫೋಟೋ ತೆಗೆಸಿಕೊಂಡರು. ಗುರುವಾರ ಒಕ್ಕಲಿಗರ ಭವನದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಿರ್ಮಾಣ ಹಂತದಲ್ಲಿರುವ ಜಿಲ್ಲಾ ಬಂಜಾರಾ ಭವನ ವೀಕ್ಷಣೆ ಮಾಡಿದ್ದ ಅವರು ಬಿಡುವು ಮಾಡಿಕೊಂಡು ಗಂಧದ ಗುಡಿ ಸಾಕ್ಷ್ಯಚಿತ್ರ ವೀಕ್ಷಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net