ಹೊಡೆದಿದ್ದನ್ನೇ ಬಿಂಬಿಸುವ ಅಗತ್ಯವಿಲ್ಲ: ಕೆ.ದೇವೇಂದ್ರಪ್ಪ

12 smg Devendrappa
Published on

ಶಿವಮೊಗ್ಗ: ಅನುಚಿತವಾಗಿ ವರ್ತಿಸಿದ ಪಕ್ಷದ ಕಾರ್ಯಕರ್ತನಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಂದೇಟು ಹೊಡೆದ ಪ್ರಕರಣವನ್ನೇ ಬಿಜೆಪಿ ನಾಯಕರು ದೊಡ್ಡದಾಗಿ ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಅವರ ಪಕ್ಷದಲ್ಲಿನ ಸಮಸ್ಯೆಗಳನ್ನು ಮೊದಲು ಪರಿಹರಿಸಿಕೊಳ್ಳಲಿ ಎಂದು ಕೆಪಿಸಿಸಿ ಕಾರ್ಯದರ್ಶಿ ಕೆ.ದೇವೇಂದ್ರಪ್ಪ ಹೇಳಿದರು.

ಶಿಸ್ತು ಪಾಲಿಸುವಂತೆ ಡಿ.ಕೆ.ಶಿವಕುಮಾರ್ ಪ್ರೀತಿಯಿಂದ ಒಂದೇಟು ಹೊಡೆದಿದ್ದನ್ನೇ ಅಪರಾಧ ಎನ್ನುವಂತೆ ಪ್ರಚಾರ ನೀಡುತ್ತಿರುವುದು ಸರಿಯಲ್ಲ. ಇದು ಕಾಂಗ್ರೆಸ್‌ಗೆ ಸಂಬಂಧಿಸಿದ ವಿಚಾರ. ಬಿಜೆಪಿ ನಾಯಕರು ಇದರ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ ಎಂದರು.

ಕಾಂಗ್ರೆಸ್ ಜಿಲ್ಲಾ ಕಾರ್ಮಿಕ ಮಹಿಳಾ ಘಟಕದ ಅಧ್ಯಕ್ಷೆ ಕವಿತಾ ರಾಘವೇಂದ್ರ, ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಅರ್ಜುನ್, ಪ್ರಮುಖರಾದ ನಿಶಾದ್ ಅಹಮ್ಮದ್, ನಿಹಾಲ್ ಸಿಂಗ್, ರಾಘವೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net