ಮಲೆನಾಡಲ್ಲಿ ಕೋವಿಶೀಲ್ಡ್ ಲಸಿಕೆ ಕೊರತೆ

962465-covishield (1)
Published on
ಶಿವಮೊಗ್ಗ: ಕರೊನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿರುವ ಬೆನ್ನಲ್ಲೆ ಸ್ವಯಂಪ್ರೇರಿತವಾಗಿ ಲಸಿಕೆ ಪಡೆದುಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಿದೆ. ಹಾಗಾಗಿ ಜಿಲ್ಲೆಯಲ್ಲಿ ಕೋವಿಶೀಲ್ಡ್ ಲಸಿಕೆ ಕೊರತೆ ಎದುರಾಗಿದೆ.
4.90 ಲಕ್ಷ ಲಸಿಕೆ ವಿತರಣೆ ಗುರಿಯನ್ನು ಆರೋಗ್ಯ ಇಲಾಖೆ ಹಾಕಿಕೊಂಡಿದೆ. ಈಗಾಗಲೇ 1.90 ಲಕ್ಷ ಜನರು ಲಸಿಕೆ ಪಡೆದುಕೊಂಡಿದ್ದಾರೆ. ಗುರುವಾರ ಕೋವಿಶೀಲ್ಡ್ 2 ಸಾವಿರ, ಕೋವ್ಯಾಕ್ಸಿನ್ 6 ಸಾವಿರ ಲಸಿಕೆ ಬಂದಿದೆ. ಆದರೂ ಲಸಿಕೆ ಪಡೆಯುವವರು ಹೆಚ್ಚುತ್ತಿದ್ದು ಕೋವಿಶೀಲ್ಡ್ ಲಸಿಕೆ ಪೂರೈಕೆ ಕಡಿಮೆಯಾಗಿದೆ.
ಇನ್ನುಳಿದಂತೆ 10 ಸಾವಿರ ಕೋವ್ಯಾಕ್ಸಿನ್ ಸಂಗ್ರಹವಿದ್ದು ಶಿವಮೊಗ್ಗದಲ್ಲಿ ನಾಲ್ಕು, ಶಿಕಾರಿಪುರದಲ್ಲಿ ಮೂರು, ಸಾಗರ ಮತ್ತು ಭದ್ರಾವತಿಯಲ್ಲಿ ತಲಾ ಒಂದೊಂದು ಕೇಂದ್ರದಲ್ಲಿ ಕೋವ್ಯಾಕ್ಸಿನ್ ನೀಡಲು ಸೂಚನೆ ನೀಡಲಾಗಿದೆ ಎನ್ನುತ್ತಾರೆ ಜಿಲ್ಲಾ ಲಸಿಕಾ ಅಧಿಕಾರಿ ಡಾ. ನಾಗರಾಜ್ ನಾಯಕ್.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net