ಲಸಿಕೆಗಳ ನಡುವಿನ ಅಂತರ ಮರುಪರಿಶೀಲನೆಗೆ ಒತ್ತಾಯ

18 smg 6
Published on

ಶಿವಮೊಗ್ಗ: ಕರೊನಾ ಲಸಿಕೆಗಳ ನಡುವಿನ ಅಂತರ ಮರು ಪರಿಶೀಲಿಸುವಂತೆ ಒತ್ತಾಯಿಸಿ ರಾಜ್ಯ ನಾಗರಿಕರ ರಕ್ಷಣಾ ಸಮಿತಿ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.

ಆರಂಭದಲ್ಲಿ ಮೊದಲೆರಡು ಡೋಸ್ ನಡುವೆ 4 ವಾರಗಳ ಅಂತರವಿತ್ತು. ಆನಂತರ ಕೇಂದ್ರ ಲಸಿಕೀಕರಣ ತಜ್ಞರ ಸಮಿತಿಯ ಶಿಫಾರಸಿನಂತೆ ಅದನ್ನು ಕೇಂದ್ರ ಸರ್ಕಾರ ಬದಲಿಸುತ್ತಿದೆ. ಪ್ರಸ್ತುತ ಕೋವಿಶೀಲ್ಡ್ 2ನೇ ಡೋಸ್ ಪಡೆಯಲು 16 ವಾರಗಳ ಅಂತರ ನಿಗದಿಸಿದ್ದು ಇದನ್ನು ತಜ್ಞರ ಸಮಿತಿಯೊಂದಿಗೆ ಮರು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಸಮಿತಿ ಅಧ್ಯಕ್ಷ ಕೆ.ಶೇಖರ್, ಪ್ರಧಾನ ಕಾರ್ಯದರ್ಶಿ ಆರ್.ರಾಘವೇಂದ್ರ, ಖಜಾಂಚಿ ಶಿವಮೊಗ್ಗ ವಿನೋದ್, ಸಂಘಟನಾ ಕಾರ್ಯದರ್ಶಿ ಹರೀಶ್, ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಉಷಾ ಉತ್ತಪ್ಪ, ಶಿವಮೊಗ್ಗ ನಗರ ಘಟಕದ ಉಪಾಧ್ಯಕ್ಷರಾದ ವೆಂಕಟೇಶ್, ಶ್ರೆಯಸ್, ನಗರ ಘಟಕದ ಸಹಕಾರ್ಯದರ್ಶಿ ಸತೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net