ಕೇಂದ್ರಕ್ಕಿದೆ ಬೆನ್ನುಮೂಳೆ ಮುರಿಯುವ ಶಕ್ತಿ; ಕೆ.ಎಸ್.ಈಶ್ವರಪ್ಪ

Kse
Published on

ಶಿವಮೊಗ್ಗ: ಕೇಂದ್ರ ಸರ್ಕಾರ ದೇಶದ್ರೋಹಿ ಪಿಎಫ್‌ಐ ಸಂಘಟನೆ ನಿಷೇಧ ಮಾಡಿದೆ. ಮತ್ತೆ ಇಂತಹ ಸಂಘಟನೆ ಹುಟ್ಟುಹಾಕಲು ಹೊರಟರೆ ಅದರ ಬೆನ್ನುಮೂಳೆ ಮುರಿಯುವ ಶಕ್ತಿ ಕೇಂದ್ರ ಸರ್ಕಾರಕ್ಕಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಗುಡುಗಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಪಿಎಫ್‌ಐ ಸಂಘಟನೆ ನಿಷೇಧಿಸಿರುವುದನ್ನ ಕಾಂಗ್ರೆಸ್ ಮತ್ತು ದೇಶಭಕ್ತ ಮುಸ್ಲಿಂ ನಾಯಕರು ಬೆಂಬಲ ಕೊಡಬೇಕು. ಪಿಎಫ್‌ಐ ಕಾರ್ಯಕರ್ತರಿಗೆ ಬುದ್ಧಿ ಹೇಳಿ ಸರಿ ದಾರಿಯಲ್ಲಿ ನಡೆಯುವಂತೆ ಮಾಡಬೇಕಿದೆ ಎಂದರು.

ಪಿಎಫ್‌ಐ ಮರುಜನ್ಮ ಪಡೆಯಲಿದೆ, ಮತ್ತೆ ಬರುತ್ತೇವೆ ಎಂದು ರಸ್ತೆ ಮತ್ತು ಗೋಡೆ ಬರಹಗಳ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ಇಂತಹ ಕೃತ್ಯಗಳನ್ನು ಹೇಡಿಗಳು ಮಾಡುತ್ತಾರೆ. ಮುಂದೆ ಈ ರೀತಿ ಮಾಡಿದರೆ ಸರ್ಕಾರ ಸರಿಯಾಗಿ ಬುದ್ಧಿ ಕಲಿಸುತ್ತದೆ ಎಂದು ಎಚ್ಚರಿಸಿದರು. ಇದೇ ವೇಳೆ ಆರ್‌ಎಸ್‌ಎಸ್‌ನನ್ನು ಯಾರಿಂದಲೂ ಏನು ಮಾಡಲು ಆಗವುದಿಲ್ಲ. ಅವರ ಅಪ್ಪ(ದೇಶದ್ರೋಹಿ ಸಂಘಟನೆಗಳು)ನಿಂದಲೂ ಬುದ್ಧಿ ಕಲಿಸಲು ಸಾಧ್ಯವಿಲ್ಲವೆಂದು ಗರಂ ಆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net