ಶಿವಮೊಗ್ಗದಲ್ಲಿ ಆ.18ರವರೆಗೆ ರಾತ್ರಿ 9ರಿಂದ ಬೈಕ್ ಸಂಚಾರಕ್ಕೆ ಬ್ರೇಕ್ !

16 smg 20
Published on

ಶಿವಮೊಗ್ಗ: ವೀರ ಸಾವರ್ಕರ್‌ಫ್ಲೆಕ್ಸ್ ವಿವಾದದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಆ.18ರ ರಾತ್ರಿ 10ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಆದೇಶಿಸಿದ್ದಾರೆ.

ತುರ್ತು ಸಂದರ್ಭ ಹೊರತುಪಡಿಸಿ ರಾತ್ರಿ 9ರಿಂದ ಬೆಳಗಿನಜಾವ 5ರವೆರೆಗೆ ಬೈಕ್‌ಗಳ ಸಂಚಾರ ನಿಷೇಧಿಸಿದ್ದಾರೆ. 40 ವರ್ಷದೊಳಗಿನ ಪುರುಷರನ್ನು ಬೈಕ್‌ಗಳಲ್ಲಿ ಹಿಂಬದಿ ಕೂರಿಸಿಕೊಂಡು ಹೋಗುವುದನ್ನೂ ನಿಷೇಧಿಸಿದ್ದಾರೆ.

5 ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ. ಯಾವುದೇ ಮೆರವಣಿಗೆ, ಸಭೆ, ಸಮಾರಂಭ ಮತ್ತು ವಿಜಯೋತ್ಸವ ಹಾಗೂ ಇತರೆ ಸಾರ್ವಜನಿಕ ಸಮಾವೇಶ ಮಾಡುವಂತಿಲ್ಲ. ಯಾವುದೇ ರೀತಿ ಆಯುಧ, ಮಾರಕಾಸ್ತ್ರ ಹಾಗೂ ಸ್ಫೋಟಕ ತೆಗೆದುಕೊಂಡು ಹೋಗುವುದು ಮತ್ತು ಸಂಗ್ರಹಿಸುವಂತಿಲ್ಲ. ವ್ಯಕ್ತಿ ಅಥವಾ ಶವಗಳ ಪ್ರತಿಕೃತಿ ಪ್ರದರ್ಶನ ಮತ್ತು ದಹನ ಮಾಡುವಂತಿಲ್ಲ. ಪ್ರಚೋದನಕಾರಿ ಘೋಷಣೆ ಹಾಗೂ ಭಿತ್ತಿಚಿತ್ರಗಳನ್ನು ತೋರಿಸುವಂತಿಲ್ಲ ಎಂದು ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net