ವಿಮಾನ ನಿಲ್ದಾಣ ಲೋಕಾರ್ಪಣೆ ನನ್ನ ಜೀವನದ ಮರೆಯಲಾರದ ದಿನ

26 smg 9
Published on

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡಲಿದ್ದಾರೆ. ಹಾಗಾಗಿ ಸೋಮವಾರ ನನ್ನ ಜೀವನದಲ್ಲಿ ಮರೆಲಾಗದ ಕ್ಷಣ. ಲಕ್ಷಾಂತರ ಜನರು ಈ ವಿಶೇಷ ಕ್ಷಣದಲ್ಲಿ ಭಾಗಿಯಾಗುವಂತೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮನವಿ ಮಾಡಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಮಾನ ನಿಲ್ದಾಣ ಇಷ್ಟೊಂದು ಬೇಗ ಪೂರ್ಣಗೊಳ್ಳುತ್ತದೆ ಎಂದು ಯಾರು ನಿರೀಕ್ಷೆ ಮಾಡಿರಲಿಲ್ಲ. ರಾಜ್ಯದಲ್ಲಿ ಬೆಂಗಳೂರಿನ ನಂತರ ಇದೇ ಅತಿ ದೊಡ್ಡ ವಿಮಾನ ನಿಲ್ದಾಣವಾಗಿದೆ. ಮೋದಿ ಅವರು ಇಡೀ ದೇಶಕ್ಕೆ ಆದರ್ಶವಾದ ವ್ಯಕ್ತಿ. ಕಾರ್ಯಕ್ರಮಕ್ಕೆ ಆಗಮಿಸಿ ಶಾಂತ ರೀತಿಯಲ್ಲಿ ವರ್ತಿಸುವಂತೆ ಮನವಿ ಮಾಡಿದರು.

ವಿಮಾನ ನಿಲ್ದಾಣ ಲೋಕಾರ್ಪಣೆ ಬಿಎಸ್‌ವೈಗೆ ಗಿಫ್ಟ್ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನೀವು ಏನು ಬೇಕಾದರೂ ಕರೆದುಕೊಳ್ಳಿ. ಮೋದಿ ಅವರನ್ನು ಲೋಕಾರ್ಪಣೆ ಮಾಡಲು ಕರೆದಿದ್ದೆವು. ಆಗ ನಿಮ್ಮ ಜನ್ಮದಿನದಂದೇ ಬರುತ್ತೇವೆ ಎಂದು ಹೇಳಿದ್ದಾರೆ. ಅದು ನನಗೆ ಅತ್ಯಂತ ಸಂತೋಷ ತರುವ ವಿಷಯವಾಗಿದೆ ಎಂದರು.

ನನ್ನನ್ನು ಕಡೆಗಣಿಸಿಲ್ಲ: ಬಿಜೆಪಿಯಲ್ಲಿ ಯಾರೂ ನನನ್ನು ಕಡೆಗಣಸಿಲ್ಲ. ಪಕ್ಷವನ್ನು ಅಧಿಕಾರಕ್ಕೆ ತರಲು ರಾಜ್ಯ ಪ್ರವಾಸ ಮಾಡುತ್ತೇನೆ. ಮತ್ತೆ ಅಧಿಕಾರಕ್ಕೆ ತರಲು ಹಾಗೂ ಮೋದಿ ಅವರ ಕೈ ಬಲ ಪಡಿಸಲು ನಿರಂತರವಾಗಿ ಕೆಲಸ ಮಾಡುತ್ತೇವೆ. ಪಕ್ಷದ ಒಬ್ಬ ಕಾರ್ಯಕರ್ತರಾಗಿ ನಾನು ಕೆಲಸ ಮಾಡುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net