ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕರಿಂದ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಸಹಾಯಕ ಎಂಜಿನಿಯರ್​

Haleshappa AE Shimoga 2 MAR 20
Published on

ಶಿವಮೊಗ್ಗ: ಮಹಾನಗರ ಪಾಲಿಕೆ ಸಹಾಯಕ ಅಭಿಯಂತರರೊಬ್ಬರು ಸೋಮವಾರ ಲಂಚ ಸ್ವೀಕರಿಸುವಾಗನ ಎಸಿಬಿ ಬಲೆಗೆ ಬಿದ್ದಿದ್ದಾರೆ. ಪಾಲಿಕೆ ಯೋಜನಾ ಇಲಾಖೆ ಸಹಾಯಕ ಇಂಜಿನಿಯರ್ ಹಾಲೇಶಪ್ಪ ಎಸಿಬಿ ಬಲೆಗೆ ಬಿದ್ದಿದ್ದು, ನಗರದ ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕ ವೆಂಕಟೇಧ್ ಶೆಟ್ಟಿ ಅವರಿಂದ 7 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಮಾಡ್ರನ್ ಚಲನಚಿತ್ರ ಮಂದಿರದ ಪಕ್ಕದ ಬಾರ್ ಆ್ಯಂಡ್ ರೆಸ್ಟೋರೆಂಟ್‌ನ್ನು ಸೋಮಿನಕೊಪ್ಪದಲ್ಲಿ ಡಾಬಾವನ್ನಾಗಿ ಪರಿವರ್ತಿಸಲು ಪರವಾನಗಿ ನೀಡಲು ಹಣ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ವೆಂಕಟೇಶ್ ಶೆಟ್ಟಿ ಅವರು ಹಣ ನೀಡುವಾಗ ಎಸಿಬಿ ಪ್ರಭಾರ ಡಿವೈಎಸ್ಪಿ ತಿಪ್ಪೇಸ್ವಾಮಿ, ಪಿಐ ವೀರೇಂದ್ರ, ಸಿಬ್ಬಂದಿಗಳಾದ ವಸಂತ್, ನಾಗರಾಜ್, ರಘು, ಸುರೇಂದ್ರ, ಹರೀಶ್ ಯೋಗೇಶ್ವರ್, ಶ್ರೀನಿವಾಸ ದಾಳಿ ನಡೆಸಿದ್ದಾರೆ. ಹಾಲೇಶಪ್ಪ ಅವರು ಈ ಹಿಂದೆ ಚಿಕ್ಕಮಗಳೂರಿನಲ್ಲಿ ಕಾರ್ಯನಿರ್ವಹಿಸುವಾಗಲೂ ಲೋಕಾಯುಕ್ತ ಬಲೆಗೆ ಬಿದ್ದಿದ್ದರು ಎಂಬ ಮಾತುಗಳು ಕೇಳಿಬಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net