ಜೆಸಿಬಿ ಕಿತ್ತೊಗೆಯಬೇಕಿದೆ: ಮುಖ್ಯಮಂತ್ರಿ ಚಂದ್ರು

app Mukya mantri chandru
Published on

ಶಿವಮೊಗ್ಗ: ರಾಜ್ಯದಲ್ಲಿರುವ ಜೆಸಿಬಿ (ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ)ಯನ್ನು ಕಿತ್ತೊಗೆಯಬೇಕಿದೆ ಎಂದು ಆಮ್ ಆದ್ಮಿ ಪಕ್ಷದ ಪ್ರಚಾರ ಸಮಿತಿ ಉಸ್ತುವಾರಿ ಮುಖ್ಯಮಂತ್ರಿ ಚಂದ್ರು ಕರೆ ನೀಡಿದರು.

ಬಿಜೆಪಿಯದ್ದು ಬೊಗಳೆ ಸರ್ಕಾರವಾಗಿದ್ದು ಕಿತ್ತಾಡುವ ಕಾಂಗ್ರೆಸ್ ಮತ್ತು ಎಲ್ಲಿ ಬೇಕಾದರೂ ರಾಜಿ ಆಗುವ ಜೆಡಿಎಸ್‌ನಿಂದ ರಾಜ್ಯದ ಜನರು ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ ಹೊಸ ಆಯ್ಕೆಯನ್ನು ಹುಡುಕುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಶಿವಮೊಗ್ಗ ನಾಲ್ವರು ಸಿಎಂಗಳನ್ನು ಕಂಡಿದೆ. ಬಿ.ಎಸ್.ಯಡಿಯೂರಪ್ಪ ಅವರು ನಾಲ್ಕು ಬಾರಿ ಸಿಎಂ ಆದರೂ ಕಾರಣಾಂತರಗಳಿಂದ ಒಮ್ಮೆಯೂ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದರು.

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ದಿವಾಕರ್ ಮಾತನಾಡಿ, ಜಿಲ್ಲೆಯ ಎಲ್ಲ ಜಿಪಂ, ತಾಪಂ ಕ್ಷೇತ್ರಗಳಲ್ಲಿ ಪಕ್ಷದಿಂದ ಅಭ್ಯರ್ಥಿಗಳು ಸ್ಪರ್ಧೆ ಮಾಡುವರು. ಪಕ್ಷ ಅಧಿಕಾರಕ್ಕೆ ಬಂದರೆ ಭದ್ರಾವತಿಯಲ್ಲಿನ ಸಾರ್ವಜನಿಕ ಉದ್ಯಮಗಳನ್ನು ಉಳಿಸಲು ಪ್ರಯತ್ನ ಮಾಡುತ್ತೇವೆ. ಯಾರಿಗೂ ಹಣ ಹಂಚದೇ ಚುನಾವಣೆ ಮಾಡುತ್ತೇವೆ. ಯಾವುದೇ ಕೆಲಸಗಳಿಗೂ ಕಮೀಷನ್ ಪಡೆಯುವುದಿಲ್ಲ ಎಂದರು. ಮುಖಂಡರಾದ ದರ್ಶನ್ ಜೈನ್, ಮನೋಹರಗೌಡ, ಏಳುಮಲೈ, ನೇತ್ರಾವತಿ, ಕೆ.ಕಿರಣ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net