ಹನುಮರಹಳ್ಳಿ ಗ್ರಾಪಂಗೆ ಶಿಲ್ಪಾ ಗುಡ್ಡನಗೌಡ್ರ ಉಪಾಧ್ಯಕ್ಷೆ

Grama panchyati election
Published on

ಶಿಗ್ಗಾಂವಿ: ತಾಲೂಕಿನ ಹನುಮರಹಳ್ಳಿ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಉಪಾಧ್ಯಕ್ಷೆಯಾಗಿ ಬಿಜೆಪಿ ಬೆಂಬಲಿತ ಶಿಲ್ಪಾ ಫಕೀರಗೌಡ ಗುಡ್ಡನಗೌಡ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸುರೇಶ ತೆಗ್ಗಿಹಳ್ಳಿ ಶುಕ್ರವಾರ ಘೊಷಣೆ ಮಾಡಿದರು.

ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಶಿಲ್ಪಾ ಗುಡ್ಡನಗೌಡ್ರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಅವಿರೋಧ ಆಯ್ಕೆ ಘೊಷಿಸಿದರು.

ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ರೇಣಕನಗೌಡ ಪಾಟೀಲ, ವಿಠ್ಠಲ ಮೋತೆನವರ, ಸಿದ್ದು ಆಡಿನ, ರಾಜೇಶ ದೊಡ್ಡಮನಿ, ಮಲ್ಲಿಕಾರ್ಜುನ ಪಾಟೀಲ, ಪರಸಪ್ಪ ಬಗಾಡೆ, ಬಸನಗೌಡ ಮೇಗಲಮನಿ, ನಿಂಬನಗೌಡ ಗುಡ್ಡನಗೌಡ್ರ, ನಿಂಗನಗೌಡ ಮೇಲಿನಮನಿ, ಶಿದ್ದಪ್ಪ ವಾಲ್ಮೀಕಿ, ಕರಿಬಸಪ್ಪ ಹಡಪದ, ನಾಗಪ್ಪ ತುಪ್ಪದ, ಮಾರುತಿ ವೆಂಕಣ್ಣನವರ, ವಿಜಯ ಕಳ್ಳಿಮನಿ, ವಿರೂಪಾಕ್ಷಗೌಡ ಪಾಟೀಲ, ಮಂಜುನಾಥ ಮೇಲಿನಮನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net