

ಹುಬ್ಬಳ್ಳಿ: ಧಾರವಾಡದ ಶಿಲ್ಪಾ ಭದ್ರಿ ಭಾರತ್ ಅಚೀವರ್ ಅವಾರ್ಡ್ಗೆ ಭಾಜನರಾಗಿದ್ದಾರೆ. ಇತ್ತೀಚೆಗೆ ಪುಣೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಿತ್ರ ನಟಿ ಅಮಿಷಾ ಪಾಟೀಲ ಪ್ರಶಸ್ತಿ ಪ್ರದಾನ ಮಾಡಿದರು. ಭಾರತ ಮತ್ತು ಹೊರ ದೇಶದಲ್ಲಿ ಅಬ್ಯಾಕಸ್ ಟ್ರೇನಿಂಗ್ ಮೂಲಕ ವಿದ್ಯಾರ್ಥಿಗಳ ಜೀವನದಲ್ಲಿ ಗಮನಾರ್ಹ ಬದಲಾವಣೆಗೆ ಕಾರಣರಾಗಿರುವುದನ್ನು ಗುರುತಿಸಿ ಶಿಲ್ಪಾ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. 4ರಿಂದ 14 ವಯೋಮಿತಿ ಮಕ್ಕಳಿಗೆ ಪರಿಣಾಮಕಾರಿಯಾಗಿ ಅಬ್ಯಾಕಸ್ ತರಬೇತಿ ನೀಡಿರುವುದು ಗುರುತಿಸಲಾಗಿದೆ.