ಶೀಲಹಳ್ಳಿ ಜಮೀನಿನಲ್ಲಿ ವಾಮಾಚಾರ

260722 Shilahalli sorcery
ಲಿಂಗಸುಗೂರು ಸಮೀಪದ ಶೀಲಹಳ್ಳಿಯಲ್ಲಿ ರೈತರು ಪಪ್ಪಾಯ, ದಾಳಿಂಬೆ ಹಾಕಿದ ಜಮೀನಿನ ಬನ್ನಿ ಮರದಲ್ಲಿ ಲಿಂಬೆಹಣ್ಣು, ತಾಯತಗಳನ್ನು ಕಟ್ಟಿ ವಾಮಾಚಾರ ಮಾಡಿರುವುದು.
Published on

ಲಿಂಗಸುಗೂರು: ತಾಲೂಕಿನ ಶೀಲಹಳ್ಳಿ ಗ್ರಾಮದ ಜಮೀನೊಂದರಲ್ಲಿ ಕೆಲವರು ಕಳೆದೆರಡು ದಿನಗಳ ಹಿಂದೆ ವಾಮಾಚಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಶೀಲಹಳ್ಳಿಯ ಬಸವರಾಜ ಕೊಡ್ಲಿ ಹಾಗೂ ವೀರೇಶ ಜಗವತಿ ಮಠ ಎಂಬ ಯುವ ರೈತರು, ಅದೇ ಗ್ರಾಮದ ವೆಂಕಟೇಶ ತುಗಲಿ ಎಂಬುವರಿಂದ 18 ಎಕರೆ ಜಮೀನನ್ನು 2017ರಲ್ಲಿ ಪ್ರತಿ ಎಕರೆಗೆ 12 ಸಾವಿರ ರೂ.ನಂತೆ ಲೀಸ್ ಪಡೆದು ಪಪ್ಪಾಯ, ದಾಳಿಂಬೆ ಬೆಳೆದಿದ್ದಾರೆ. ಫಸಲು ಕೂಡ ಉತ್ತಮವಾಗಿ ಬಂದಿದ್ದು ಜಮೀನಿನಲ್ಲಿರುವ ಬನ್ನಿ ಮರಕ್ಕೆ ನಾಲ್ಕು ನಿಂಬೆಹಣ್ಣು ಹಾಗೂ ತಾಯತ ಕಟ್ಟಿ ವಾಮಾಚಾರ ಎಸಗಲಾಗಿದೆ.

ಪ್ರಸಕ್ತ ವರ್ಷ 4 ಸಾವಿರ ಪಪ್ಪಾಯ ಮತ್ತು 8 ಸಾವಿರ ದಾಳಿಂಬೆ ಸಸಿಗಳನ್ನು ನಾಟಿ ಮಾಡಿ ಲಕ್ಷಾಂತರ ರೂ. ವೆಚ್ಚದಲ್ಲಿ ರಸಗೊಬ್ಬರ, ಔಷಧೋಪಚಾರ ಮಾಡಿದ್ದಾರೆ. ಈ ವೇಳೆ ವಾಮಾಚಾರ ನಡೆಸಿರುವುದು ರೈತರಲ್ಲಿ ಆತಂಕ ಸೃಷ್ಟಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net