

ಹಾಲಾಡಿ: ಇಲ್ಲಿನ ಅಮ್ಮ ಮಾರಿಕಾನು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜೀರ್ಣೋದ್ಧಾರಕ್ಕಾಗಿ ವೈಭವದ ಪುರ ಮೆರವಣಿಗೆಯೊಂದಿಗೆ ಶಿಲಾ ಮೂಹೂರ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಇತ್ತೀಚೆಗೆ ನಡೆಯಿತು.
ಹಾಲಾಡಿ ಗ್ರಾಮದ ಪ್ರತಿಯೊಂದು ಮನೆಯ ಪ್ರತಿ ಸದಸ್ಯರಿಂದ ತಲಾ ಒಂದರಂತೆ ಶಿಲೆಯನ್ನು ಸಂಗ್ರಹಿಸಿ, ಭಜನಾ ಸಂಕೀರ್ತನೆಯ ಪುರ ಮೆರವಣಿಗೆಯೊಂದಿಗೆ ಶಿಲಾ ಸಂಗ್ರಹಕ್ಕಾಗಿ ನಿರ್ಮಿಸಿದ ಮಂಟಪದಲ್ಲಿ ಪೂಜಿಸಲಾಯಿತು.
ಶಿಲೆಗಳ ಸಂಗ್ರಹ ಕಾರ್ಯಕ್ಕೆ ನವ ದುರ್ಗೆಯರ ಹೆಸರಿನಲ್ಲಿ 9 ಸಮಿತಿಗಳನ್ನು ರಚಿಸಿ, ಶ್ರೀ ದುರ್ಗಾ, ಶ್ರೀ ಆರ್ಯ, ಶ್ರೀ ಭಗವತಿ, ಶ್ರೀ ಕುಮಾರಿ, ಶ್ರೀ ಅಂಬಾರಿ, ಶ್ರೀ ಚಂಡಿಕಾ, ಶ್ರೀ ಮಹಿಷಮರ್ದಿನಿ, ಶ್ರೀ ಸರಸ್ವತಿ, ಶ್ರೀ ವಾಗೇಶ್ವರಿ ಸಮಿತಿಯ 9 ವಾಹನಗಳ ಮೂಲಕ ಶಿಲೆಗಳನ್ನು ಸಂಗ್ರಹಿಸಲಾಗಿದೆ.
ಪ್ರಧಾನ ಅರ್ಚಕ ವಿಘ್ನರಾಜ ಅಡಿಗ ನೇತೃತ್ವದಲ್ಲಿ ಚಂಡಿಕಾ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹಾಲಾಡಿ ಸರ್ವೋತ್ತಮ ಹೆಗ್ಡೆ, ದೇವಸ್ಥಾನದ ಆಡಳಿತ ಮೊಕ್ತೇಸರ ಹಾಲಾಡಿ ಶರತ್‌ಚಂದ್ರ ಶೆಟ್ಟಿ, ಹಿರಿಯರಾದ ರಾಮಣ್ಣ ಶೆಟ್ಟಿ, ಸಹ ಮೊಕ್ತೇಸರರಾದ ದಿವಾಕರ ಶೆಟ್ಟಿ, ಚಂದ್ರಕಾಂತ ಶೆಣೈ, ಪಳ್ಳಿ ನಟರಾಜ ಹೆಗ್ಡೆ, ಅತ್ತುಲ ಹೆಗ್ಡೆ, ಜಿ.ಎಚ್. ಪ್ರಭಾಕರ ಶೆಟ್ಟಿ, ಸೂರ್ಯಪ್ರಭಾ ಶೆಟ್ಟಿ ಹಾಲಾಡಿ, ವಕೀಲ ಶ್ಯಾಮಲಾ ಭಂಡಾರಿ, ಹಾಲಾಡಿ ಶ್ರೀ ಮರ್ಲುಚಿಕ್ಕು ದೈವಸ್ಥಾನದ ಮೊಕ್ತೇಸರ ಅಮರನಾಥ ಶೆಟ್ಟಿ, ಹಾಲಾಡಿ ಗ್ರಾಪಂ ಸದಸ್ಯ ಜನಾರ್ದನ ಹಾಲಾಡಿ, ಗುರುಪ್ರಸಾದ್ ಶೆಟ್ಟಿ ಹಾಲಾಡಿ, ಜಾನಕಿ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಜ್ಞಾನೇಶ ಶೆಟ್ಟಿ, ಖಜಾಂಚಿ ನಿತ್ಯಾನಂದ ಎಚ್., ಸದಸ್ಯರಾದ ವಿಜಯ ಶೆಟ್ಟಿ ಹಾಲಾಡಿ, ವಿನಯ ಶೆಟ್ಟಿ ಹಾಲಾಡಿ, ದಿನೇಶ ಹಾರ್ನಮಕ್ಕಿ, ನರಸಿಂಹ ನಾಯ್ಕ ಹಾರ್ನಮಕ್ಕಿ, ಉದ್ಯಮಿ ಸತೀಶ ಪ್ರಭು ಬೆಂಗಳೂರು, ರಮೇಶ ಶೆಟ್ಟಿ, ಕಾಪು, ಹಾಲಾಡಿಯ ಗ್ರಾಮಸ್ಥರು, ಭಕ್ತರು ಪಾಲ್ಗೊಂಡಿದ್ದರು. ಗಣೇಶ ಅರಸಮ್ಮಕಾನು ನಿರೂಪಿಸಿದರು. ಜ್ಞಾನೇಶ ಶೆಟ್ಟಿ ವಂದಿಸಿದರು.