

ಧಾರವಾಡ: ಬಹುಮುಖ ಪ್ರತಿಭೆಯ ಶಿಕ್ಷಕ, ಸಾಹಿತಿ ರಂಗನಾಥ ವಾಲ್ಮೀಕಿ ಅವರು ಕರ್ನಾಟಕ ವಿದ್ಯಾವರ್ಧಕ ಸಂ ಹಾಗೂ ಅಕ್ಷರ ತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆ ಕೊಡಮಾಡುವ 2023ನೇ ಸಾಲಿನ ‘ಶಿಕ್ಷಕ ರತ್ನ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಾಲೂಕಿನ ಮನಗುಂಡಿ ಪ್ರೌಢಶಾಲೆಯ ಶಿಕ್ಷಕರಾಗಿರುವ ರಂಗನಾಥ ಪ್ರತಿಷ್ಠಿತ ಪ್ರತಿಕೆಗಳಲ್ಲಿ ಹಲವಾರು ಲೇಖನಗಳನ್ನು ಬರೆದಿದ್ದಾರೆ. ದಿನಪತ್ರಿಕೆಯೊಂದರ ರಂಗಾಂತರಂಗ ಅಂಕಣ ಬರಹಗಾರರೂ ಹೌದು. ಸದೃಢ ಮನಸ್ಸು ಸಾಧನೆಗೆ ಮೆಟ್ಟಿಲು, ದೃಷ್ಟಿ ಬದಲಿಸಿದರೆ ದೃಶ್ಯವೂ ಬದಲಾದೀತು, ಅರಿವಿನ ಕನ್ನಡಿ, ಜೀವನಾಮೃತ, ರಂಗಾಂತರಂಗ ಪುಸ್ತಕಗಳನ್ನು ಬರೆದಿದ್ದಾರೆ. ರಾಜ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಮಕ್ಕಳಿಗೆ, ಶಿಕ್ಷಕರಿಗೆ ತರಬೇತಿ ನೀಡುತ್ತ ಬಂದಿರುವ ಇವರು, ಆಶಾಕಿರಣ, ಕವಿ ಪರಿಚಯ, ಗಾದೆ ಮಾತು, ವ್ಯಾಕರಣಕ್ಕೆ ಪೂರಕವಾದ ಅನೇಕ ಕನ್ನಡ ವಿಷಯದ ಸಂಪನ್ಮೂಲ ರಚಿಸಿ ಬಳಸಿದ್ದಾರೆ. ನಟರೂ ಅಗಿ ನಾಟಕ, ಕಿರುಚಿತ್ರಗಳಲ್ಲಿ ನಟಿಸಿದ್ದಾರೆ. ಅನೇಕ ಚಿಂತನಗಳು ಧಾರವಾಡ ಆಕಾಶವಾಣಿ ನಿಲಯದಿಂದ ಪ್ರಸಾರಗೊಂಡಿವೆ. ಈಗಾಗಲೇ ಅಕ್ಷರ ಸಿರಿ, ರಾಜ್ಯ ಮಟ್ಟದ ಶತಶೃಂಗ, ಕರುನಾಡಿಗೆ ದಾರಿದೀಪ ನಮ್ಮ ಗುರು, ರಾಷ್ಟ್ರ ನಿರ್ಮಾತೃ ಸೇರಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ದಂತೆ ಇನ್ನು ಹಲವು ಪುರಸ್ಕಾರಗಳು ಸಂದಿವೆ. ಶೈಕ್ಷಣಿಕ ಸಾಧನೆ ಗಮನಿಸಿ ಇಲಾಖೆ 2018ರಲ್ಲಿ ಧಾರವಾಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ.