

ಶಿಕಾರಿಪುರ: ತಾಲೂಕಿನ ಅಮಟೆಕೊಪ್ಪ ಗ್ರಾಪಂನಲ್ಲಿ ಕಾಂಗ್ರೆಸ್ ಬೆಂಬಲಿತರು ಮೇಲುಗೈ ಸಾಧಿಸಿದ್ದು ಅಧ್ಯಕ್ಷರಾಗಿ ಮಂಜುಳಾ ಶಿವಣ್ಣ, ಉಪಾಧ್ಯಕ್ಷರಾಗಿ ಪ್ರದೀಪ್(ಪ್ರಮೋದ್) ಗುರುವಾರ ಆಯ್ಕೆಯಾದರು.
12 ಸದಸ್ಯ ಬಲದ ಗ್ರಾಪಂನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಂಜುಳಾ ಶಿವಣ್ಣ 7 ಮತ ಪಡೆದರೆ, ಪ್ರತಿಸ್ಪರ್ಧಿ ಮಮತಾ 5 ಮತ ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರದೀಪ್ 7 ಮತ ಪಡೆದರೆ, ಎದುರಾಳಿ ರವಿಕುಮಾರ್ 5 ಮತ ಪಡೆದರು. ಪಶು ವೈದ್ಯ ಸಹಾಯಕ ನಿರ್ದೇಶಕ ಡಾ.ರವಿಕುಮಾರ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಹುಲ್ಮಾರ್ ನೇತೃತ್ವದಲ್ಲಿ ನೂತನ ಅಧ್ಯಕ್ಷೆ, ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ತಮ್ಮಣ್ಣ, ಕಲವತ್ತಿ ಈಶಣ್ಣ, ಶ್ರೀಕಾಂತ್, ಬನ್ನೂರು ನಾಗರಾಜ್, ಪ್ರಕಾಶ್, ಜಗದೀಶ್ ಅಂಬಾರಗೊಪ್ಪ ಇತರರಿದ್ದರು.
ಸುಮಿತ್ರಮ್ಮಗೆ ಗಾದಿ: ತಾಲೂಕಿನ ಗೊಗ್ಗ ಗ್ರಾಪಂ ನೂತನ ಅಧ್ಯಕ್ಷರಾಗಿ ಸುಮಿತ್ರಮ್ಮ ಮತ್ತು ಉಪಾಧ್ಯಕ್ಷರಾಗಿ ಗುರುಸಿದ್ದಪ್ಪ ಅವಿರೋಧವಾಗಿ ಗುರುವಾರ ಆಯ್ಕೆಗೊಂಡರು. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಎಸ್.ಪ್ರಭು ಶಂಕರ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.