ಹೋರಿ ಬೆದರಿಸುವ ಹಬ್ಬಕ್ಕೆ ಎರಡನೇ ಬಲಿ

30 smg prashanthkumar
Published on

ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಗಾಮ ಗ್ರಾಮದಲ್ಲಿ ಕಿಚ್ಚು ಹಾಯ್ದ ಹೋರಿಯ ಕಾಲ್ತಳಿತಕ್ಕೆ ಸಿಲುಕಿ ಕೃಷಿಕರೊಬ್ಬರು ಮತದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈ ಬಾರಿ ಹೋರಿ ಬೆದರಿಸುವ ಹಬ್ಬದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಹೋರಿಯ ಕಾಲ್ತುಳಿತಕ್ಕೆ ಗಾಮದ ಕೃಷಿಕ ಪ್ರಶಾಂತ ಕುಮಾರ್ (36) ಮೃತಪಟ್ಟಿದ್ದಾರೆ. ಕಿಚ್ಚು ಹಾಯಿಸುವಾಗ ಓಡುತ್ತಿದ್ದ ಹೋರಿ ದಿಢೀರನೆ ಜನರತ್ತ ನುಗ್ಗಿದೆ. ಈ ವೇಳೆ ಅಲ್ಲಿ ನಿಂತಿದ್ದ ಪ್ರಶಾಂತಕುಮಾರ್ ಮೇಲೆ ಗುದ್ದಿದೆ. ಈ ವೇಳೆ ನೆಲಕ್ಕೆ ಬಿದ್ದ ಪ್ರಶಾಂತ್‌ನ ಎದೆ ಮೇಲೆ ಕಾಲಿಟ್ಟಿದ್ದು ವಿಡಿಯೋ ವೈರಲ್ ಆಗಿದೆ.

ತೀವ್ರವಾಗಿ ಗಾಯಗೊಂಡ ಆತನನ್ನು ಶಿಕಾರಿಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ. ಸೊರಬ ತಾಲೂಕಿನ ಜಡೆಯಲ್ಲಿ ಶುಕ್ರವಾರ ಹೋರಿ ತಿವಿದು ಚಗಟೂರಿನ ಆದರ್ಶ (20) ಎಂಬಾತ ಮೃತಪಟ್ಟಿದ್ದನು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net