ಬಸ್ ನಿಲುಗಡೆಗೆ ಶಿಗ್ಲಿ ಗ್ರಾಮಸ್ಥರ ಆಗ್ರಹ

Shigli
Published on

ಲಕ್ಷ್ಮೇಶ್ವರ: ಶಿಗ್ಲಿ ಗ್ರಾಮದ ಹಳೆ ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆ ಮಾಡಬೇಕು ಎಂದು ಗ್ರಾಪಂ ಸದಸ್ಯರು ಹಾಗೂ ವ್ಯಾಪಾರಸ್ಥರು ಅಗ್ರಹಿಸಿದ್ದಾರೆ.

ಗ್ರಾಪಂ ಸದಸ್ಯ ಸಂತೋಷ ತಾಂದಳೆ ಮಾತನಾಡಿ, ಗ್ರಾಮದ ಕೇಂದ್ರ ಸ್ಥಳದಲ್ಲಿನ ಹಳೇ ಬಸ್ ನಿಲ್ದಾಣ ಎಲ್ಲ ವರ್ಗದವರಿಗೂ ಅನುಕೂಲವಾಗಿದೆ. ಆದರೆ, ಕೆಲ ದಿನಗಳಿಂದ ಹಳೇ ಬಸ್ ನಿಲ್ದಾಣವಿದ್ದ ಸ್ಥಳದಲ್ಲಿ ಬಸ್ ನಿಲುಗಡೆ ಮಾಡದ್ದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ. ಹೊಸ ಬಸ್ ನಿಲ್ದಾಣದೊಳಗೆ ಹೋಗಿ ಬರುವ ಎಲ್ಲ ಬಸ್‌ಗಳು ಮೊದಲಿನಂತೆ ಹಳೇ ಬಸ್ ನಿಲ್ದಾಣದಲ್ಲಿ ನಿಲುಗಡೆಯಾಗಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೂಡಲೇ ಅಧಿಕಾರಿಗಳು ಜನರ ಮನವಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು. ಗ್ರಾಮಸ್ಥರಾದ ಬಸವರಾಜ ಕೂಸನೂರ, ಸಿದ್ದರಾಮಸ್ವಾಮಿ ಪೂಜಾರ, ಶಶಿಧರ ಮುಳುಗುಂದಮಠ, ಮಂಜುನಾಥ ಕಡೆಮನಿ, ವಿನಾಯಕ ಹೆಬ್ಬಳ್ಳಿ, ಆನಂದ ಮಾಳಗಿ, ಸಂತೋಷ ಜನಿವಾರದ, ಯಲ್ಲಪ್ಪ ಲಕ್ಷ್ಮೇಶ್ವರ, ಬಸವರಾಜ ಗುಂಡಮಿ, ಲಕ್ಷ್ಮಣ ಕುರಿ, ಶಿವಪುತ್ರಪ್ಪ ಅಳ್ಳಳ್ಳಿ ಸೇರಿ ಅನೇಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net