ಶಿಗ್ಲಿ ಶಾಲೆ ಮಕ್ಕಳಿಗೆ ಊಟದ ಕಟ್ಟೆ ನಿರ್ಮಾಣ

31-SHIGLI
Published on

ಶಿಗ್ಲಿ: ಗ್ರಾಮದ ಎಸ್.ಎಸ್. ಕೂಡ್ಲಮಠ ಶಾಲೆಯಲ್ಲಿ 2003-04ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಕಲಿತ ವಿದ್ಯಾರ್ಥಿಗಳು ಶಾಲೆ ಆವರಣದಲ್ಲಿ ಮಕ್ಕಳು ಕುಳಿತು ಊಟ ಮಾಡಲು ಕಟ್ಟೆ ಕಟ್ಟಿಸಿದ್ದಾರೆ. ಇದು ಇಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಿಗೆ ಸಂತಸ ಮೂಡಿಸಿದೆ.

ಹಳೇ ವಿದ್ಯಾರ್ಥಿಗಳು ಇತ್ತೀಚೆಗಷ್ಟೇ ಶಾಲೆಯಲ್ಲಿ ಗುರುವಂದನೆ ಹಾಗೂ ಸುಮಧುರ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಾರ್ಯಕ್ರಮ ನಿರ್ವಹಿಸಿ ಉಳಿದ ಹಣದಲ್ಲಿ ಮಕ್ಕಳಿಗೆ ಕುಳಿತು ಊಟ ಮಾಡಲು, ವಿಶ್ರಾಂತಿ ಪಡೆಯಲು ಅನುಕೂಲವಾಗಲು ಕಟ್ಟೆ ಕಟ್ಟಲು ನಿರ್ಧರಿಸಿದರು. ಅದರಂತೆ ಶಾಲಾ ಆವರಣದಲ್ಲಿರುವ ಮರಗಳ ಕೆಳಗೆ 16 ಕಟ್ಟೆಗಳನ್ನು ಕಟ್ಟಿಸಿದ್ದಾರೆ. ಇದೀಗ ಆ ಕಟ್ಟೆಗಳ ಮೇಲೆ ಕುಳಿತು ವಿದ್ಯಾರ್ಥಿಗಳು ಖುಷಿಯಿಂದ ಊಟ ಮಾಡುತ್ತಿದ್ದಾರೆ.

ಇತ್ತೀಚೆಗೆ ಶಾಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಪಿ. ಬಳಿಗಾರ ಊಟದ ಕಟ್ಟೆಗಳನ್ನು ಉದ್ಘಾಟಿಸಿದರು. ಶಾಲೆ ಅಧ್ಯಕ್ಷ ಎಸ್.ಪಿ. ಬಳಿಗಾರ ಮಾತನಾಡಿ, ನಮ್ಮೂರ ಶಾಲೆಯಲ್ಲಿ 2003-04ನೇ ಸಾಲಿನ ಹಳೇ ವಿದ್ಯಾರ್ಥಿಗಳು ಮಕ್ಕಳ ಅನುಕೂಲಕ್ಕಾಗಿ ಊಟದ ಕಟ್ಟೆಗಳನ್ನು ನಿರ್ವಿುಸಿ ಸೈ ಎನಿಸಿಕೊಂಡಿದ್ದಾರೆ. ಇವರ ಕಾರ್ಯ ಇತರರಿಗೆ ಮಾದರಿಯಾಗಲಿದೆ ಎಂದರು.

ಎಫ್.ಡಿ. ಹುನಗುಂದ, ಎಚ್.ಎಫ್. ತಳವಾರ, ಸಿ.ಎಂ. ರಾಗಿ, ಮುಖ್ಯೋಪಾಧ್ಯಾಯ ಸಿ.ಬಿ. ಮೊಗಲಿ, ಹಳೇ ವಿದ್ಯಾರ್ಥಿಗಳಾದ ರಾಜು ಓಲೇಕಾರ, ಚೇತನ ಕುಬಸದ, ಶರಣಪ್ಪ ಅಕ್ಕಿ, ಗಣೇಶ ಹುಲಗೂರ, ಮಂಜುನಾಥ ಕುಂಬಾರ, ಮಲ್ಲಿಕಾರ್ಜುನ ಕುಬಸದ, ಶಿವಶಂಕರ ಹಾಳಕೇರಿ, ಮಾಬುಸಾಬ್ ಸೂರಣಗಿ, ಬಸವರಾಜ ದುರ್ಗರ, ಪ್ರಶಾಂತ ಬಡೆಪ್ಪನವರ, ಕೋಟ್ರೆಶ ಅಸುಂಡಿ, ಕೃಷ್ಣಾ ಬಡ್ನಿ, ಚಂದ್ರಶೇಖರ ಜಿ.ಜಿ., ಗೌರಮ್ಮ ಧರ್ಮರ, ಸುಜಾತಾ ಮಾಳೋದಿ, ನೂರಮ್ಮದ್ ಕುದರಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net