

ಶಿಗ್ಗಾಂವಿ: ಸ್ವಚ್ಛ ಭಾರತ ಮಿಷನ್ ಅಡಿ ಕೈಗೊಳ್ಳುವ ಯೋಜನೆಗಳ ಪೈಕಿ ಕೆಲವು ಯೋಜನೆಗಳು ಕಡತಗಳಿಗೆ ಸೀಮಿತವಾಗುತ್ತವೆ ಎಂಬುದಕ್ಕೆ ಪಟ್ಟಣದಲ್ಲಿ ಪುರಸಭೆಯಿಂದ ನಿರ್ವಿುಸಿರುವ ಘನತ್ಯಾಜ್ಯ ವಿಲೇವಾರಿ ಘಟಕ ಸಾಕ್ಷಿಯಾಗಿದೆ. ಪಟ್ಟಣದ ವಿವಿಧ ಬಡಾವಣೆಗಳಿಂದ ಸಂಗ್ರಹಿಸುವ ಕಸವನ್ನು ಸಂಸ್ಕರಿಸಲು ತಾಲೂಕಿನ ಕುರ್ಸಾಪೂರ ಗ್ರಾಮದ ಬಳಿ ಸುಮಾರು 10 ಎಕರೆ ಪ್ರದೇಶದಲ್ಲಿ 56 ಲಕ್ಷ ರೂ. ವೆಚ್ಚದಲ್ಲಿ ಘಟಕ ನಿರ್ವಿುಸಲಾಗಿದೆ. ಕಸ ಸಂಸ್ಕರಣೆಗೆ ಹೊರ ರಾಜ್ಯದ ವ್ಯಕ್ತಿಗೆ ಗುತ್ತಿಗೆ ನೀಡಲಾಗಿದೆ ಎನ್ನಲಾಗಿದೆ. ಇಲಾಖೆಯ ದಾಖಲೆಗಳಲ್ಲಿ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕ ಕಾರ್ಯಾರಂಭಿಸಿದೆ ಎಂಬ ಮಾಹಿತಿ ಇದೆ. ಆದರೆ, ವಾಸ್ತವದಲ್ಲಿ ಘಟಕ ಕೆಲಸ ಆರಂಭಿಸಿರುವುದು ಕಂಡು ಬಂದಿಲ್ಲ. ಕಸ ವಿಂಗಡಣೆ, ಸಂಸ್ಕರಣೆ ಸೇರಿ ಇಲ್ಲಿ ಅಳವಡಿಸಿರುವ ಎಲ್ಲ ಯಂತ್ರೋಪಕರಣಗಳು ತುಕ್ಕು ಹಿಡಿಯುತ್ತಿವೆ. ಕಟ್ಟಡದ ಸುತ್ತ ಗಿಡಗಂಟಿ ಬೆಳೆದಿವೆ. ಲಕ್ಷಾಂತರ ರೂ. ಅನುದಾನ ವ್ಯಯಿಸಿ ಮೂರ್ನಾಲ್ಕು ವರ್ಷಗಳ ಹಿಂದೆ ನಿರ್ವಿುಸಿದ ಘಟಕ ಇನ್ನೂ ಯಾಕೆ ಕಾರ್ಯ ಆರಂಭಿಸಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಕಸ ಸಂಸ್ಕರಣೆ ಪ್ರಕ್ರಿಯೆ ಹೇಗಿರುತ್ತೆ ?: ಕಸ ತುಂಬಿಕೊಂಡು ಬರುವ ವಾಹನಗಳನ್ನು ಮೊದಲಿಗೆ ತೂಕದ ಪರೀಕ್ಷೆ ಮಾಡಲಾಗುತ್ತದೆ. ನಂತರ ಕಸವನ್ನು ಹೊರಗಡೆ ಡಂಪ್ ಮಾಡಲಾಗುತ್ತದೆ. ಅದನ್ನು 21 ದಿನ ಕೊಳೆಯಲು ಬಿಡಲಾಗುತ್ತದೆ. ಕೊಳೆಯಲು ಇಎಂ ಕಲ್ಚರ್ ಕೆಮಿಕಲ್ ಸಿಂಪಡಿಸಲಾಗುತ್ತದೆ. ಕಸದಿಂದ ಹೊರ ಹೊಮ್ಮುವ ನೀರಿನ ತ್ಯಾಜ್ಯವು ಅಲ್ಲಿಯೇ ಪಕ್ಕದ ಗುಂಡಿಯಲ್ಲಿ ಸಂಗ್ರಹವಾಗುತ್ತದೆ. ಕಸ ಪೂರ್ತಿ ಕೊಳೆತ ಬಳಿಕ ಟ್ರಾಮೆಲ್ ಯಂತ್ರದಲ್ಲಿ ಹಾಕಿದ ಮೇಲೆ ಪ್ಲಾಸ್ಟಿಕ್, ಗಾಜು, ಕಲ್ಲು ಸೇರಿ ಇನ್ನುಳಿದ ಕಸವನ್ನು ಪ್ರತ್ಯೇಕಿಸಲಾಗುತ್ತದೆ. ಬಳಿಕ ಕಸವನ್ನು ಫಿಲ್ಟರ್ ಮಾಡಲಾಗುತ್ತದೆ. ಕೊನೆಗೆ ಯಂತ್ರದಲ್ಲಿ ಬೇರ್ಪಡಿಸಿದಾಗ ಗುಣಮಟ್ಟದ ಗೊಬ್ಬರ ತಯಾರಾಗುತ್ತಿದೆ. ಅಧಿಕಾರಿಗಳ ನಿರಾಸಕ್ತಿ: ನಗರದಲ್ಲಿ ಉತ್ಪತ್ತಿಯಾಗುವ ಅಂದಿನ ಕಸವನ್ನು ಅಂದೇ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಘನತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಲಾಗಿದೆ. ಆದರೆ, ಅಧಿಕಾರಿಗಳ ನಿರಾಸಕ್ತಿಯಿಂದ ನಿರೀಕ್ಷಿತ ಯೋಜನೆ ನನೆಗುದಿಗೆ ಬಿದ್ದಿದೆ ಎಂಬುದು ನಾಗರಿಕರ ಆರೋಪ. ಹಾರಿ ಹೋದ ಮೇಲ್ಛಾವಣಿ: ಕಳೆದ ಎರಡು ವರ್ಷಗಳ ಹಿಂದೆ ಮುಂಗಾರಿನಲ್ಲಿ ಬೀಸಿದ ಬಿರುಗಾಳಿ ಮಳೆಗೆ ಕಸ ವಿಲೇವಾರಿ ಘಟಕದ ಮೇಲ್ಛಾವಣಿ ಹಾರಿ ಹೋಗಿತ್ತು. ಅಲ್ಲಲ್ಲಿ ಹಾರಿ ಬಿದ್ದ ತಗಡಿನ ಸೀಟ್ಗಳನ್ನು ಒಂದೆಡೆ ಕೂಡಿ ಹಾಕಲಾಗಿದೆ. ಈವರೆಗೂ ಅವುಗಳನ್ನು ಜೋಡಿಸಿಲ್ಲ.
ಪುರಸಭೆಗೆ ಬಹುನಿರೀಕ್ಷಿತ ಆದಾಯದ ಮೂಲವಾಗಿದ್ದ ಸಂಸ್ಕರಣ ಘಟಕ ನಿರ್ಮಾಣ ಕಾರ್ಯ ನನೆಗುದಿಗೆ ಬೀಳಲು ಪುರಸಭೆ ಮುಖ್ಯಾಧಿಕಾರಿ ಮತ್ತು ಘಟಕ ನಿರ್ವಣಕ್ಕೆ ನಿಯೋಜನೆಗೊಂಡ ಮುಖ್ಯ ಇಂಜಿನಿಯರ್ ನಿರಾಸಕ್ತಿ ಕಾರಣ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಅವು› ಗಂಭೀರವಾಗಿ ಪರಿಗಣಿಸಲಿಲ್ಲ. | ಗೌಸ್ಖಾನ್ ಮುನಸಿ, ಪುರಸಭೆ ಸದಸ್ಯ ಘಟಕ ನಿರ್ವಣಕ್ಕೆ ಟೆಂಡರ್ ಪಡೆದ ಗುತ್ತಿಗೆದಾರನಿಗೆ ಮತ್ತು ಸಂಬಂಧಿಸಿದ ಇಂಜಿನಿಯರ್ಗಳಿಗೆ ನೋಟಿಸ್ ಕೊಡಲು ಸೂಚಿಸಿದ್ದೇನೆ. ಪುರಸಭೆ ಅಧಿಕಾರಿಗಳೊಂದಿಗೆ ರ್ಚಚಿಸಿ ಘಟಕ ಕಾರ್ಯಾರಂಭ ಮಾಡಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು. | ಸಿದ್ಧಾರ್ಥಗೌಡ ಪಾಟೀಲ ಪುರಸಭೆ ಅಧ್ಯಕ್ಷ