ಶಶಿಧರ ಯಲಿಗಾರಗೆ ಶಿಗ್ಗಾಂವಿ ಟಿಕೆಟ್ ಕೊಡಲು ಒತ್ತಾಯ

Published on

ಹಾವೇರಿ: ಪಂಚಮಸಾಲಿ ಸಮುದಾಯಕ್ಕೆ ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಒಂದು ಟಿಕೆಟ್ ಸಹ ನೀಡಲಾಗಿಲ್ಲ. ಹಾಗಾಗಿ, ಶಿಗ್ಗಾಂವಿ- ಸವಣೂರ ಕ್ಷೇತ್ರದಲ್ಲಿ ಈ ಬಾರಿ ಸಮಾಜ ಸೇವಕ ಶಶಿಧರ ಯಲಿಗಾರ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಬೇಕು ಎಂದು ಕಾಂಗ್ರೆಸ್ ಮುಖಂಡ ಪಿ.ವಿ. ನಡುವಿನಮಠ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಗ್ಗಾಂವಿ ಕ್ಷೇತ್ರದಿಂದ 14 ಅಭ್ಯರ್ಥಿಗಳು ಟಿಕೆಟ್‌ಗಾಗಿ ಕಾಂಗ್ರೆಸ್ ಅರ್ಜಿ ಸಲ್ಲಿಸಿದ್ದರು. ಅಲ್ಪಸಂಖ್ಯಾತ ಸಮುದಾಯದ ಅಜೀಮ್‌ಪೀರ್ ಖಾದ್ರಿ ಅವರಿಗೆ ಈಗಾಗಲೇ ನಾಲ್ಕು ಬಾರಿ ಟಿಕೆಟ್ ನೀಡಲಾಗಿದೆ. ಆದರೂ ಅವರು ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಹಿಂದು- ಮುಸ್ಲಿಂ ಹೆಸರಲ್ಲಿ ಕುತಂತ್ರದ ರಾಜಕಾರಣ ಮಾಡಿದ್ದರಿಂದ ಸೋಲುಂಟಾಗಿತ್ತು. ಈ ಬಾರಿ ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ಕೊಟ್ಟರೆ ಗೆಲುವು ಖಚಿತ. ಹಾಗಾಗಿ, ಈ ಬಾರಿ ಪಂಚಮಸಾಲಿ ಸಮುದಾಯದ ವಿನಯ ಕುಲಕರ್ಣಿ ಅಥವಾ ಶಶಿಧರ ಯಲಿಗಾರ ಅವರಿಗೆ ಟಿಕೆಟ್ ಘೋಷಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕಾರಡಗಿ ಜಿಪಂ ಮಾಜಿ ಸದಸ್ಯ ರಮೇಶ ದುಗ್ಗತ್ತಿ, ಬಸಲಿಂಗಪ್ಪ ನರಗುಂದ, ಅಬ್ದುಲ್ ಖಾದರ್ ಶಿಗ್ಗಾಂವಿ, ಮಹೇಶ ಅಪ್ಪಣ್ಣವರ, ಮೌಲಾಲ ಜಮಾದಾರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net