ವ್ಯಕ್ತಿತ್ವ ವಿಕಸನಗೊಳಿಸುವ ವಚನ ಸಾಹಿತ್ಯ

30-sgn vachana
Published on

ಶಿಗ್ಗಾಂವಿ: ಹನ್ನೆರಡನೇ ಶತಮಾನದಲ್ಲಿ ರಚಿತವಾಗಿರುವ ವಚನ ಸಾಹಿತ್ಯವು 21ನೇ ಶತಮಾನದ ಇಂದಿನ ಯುವಪೀಳಿಗೆಗೆ ದಾರಿದೀಪವಾಗಿ ನೆರವು ನೀಡುತ್ತಿರುವುದನ್ನು ನೋಡಿದಾಗ ಅದರ ಸತ್ವ ಎಂತಹದು ಎನ್ನುವುದು ನಮ್ಮ ಅರಿವಿಗೆ ಬರುತ್ತದೆ ಎಂದು ಬಿಆರ್​ಸಿಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಸವರಾಜ ಬಸರಿಕಟ್ಟಿ ಹೇಳಿದರು.

ಪಟ್ಟಣದ ನಳಂದಾ ಪ್ರೌಢಶಾಲೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ನಳಂದಾ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಉಪನ್ಯಾಸ ನೀಡಿದರು.

ವಚನಗಳು ವ್ಯಕ್ತಿತ್ವ ವಿಕಸನಕ್ಕೆ ಇರುವಂತ ಅತ್ಯಂತ ದೊಡ್ಡ ಸಾಹಿತ್ಯವಾಗಿದೆ. ಅದನ್ನು ಅರಿತುಕೊಳ್ಳುವ ಗುಣವನ್ನು ಯುವಕರಲ್ಲಿ ಬೆಳೆಸಬೇಕಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ನಳಂದಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಪಿ.ಆರ್. ಪಾಟೀಲ ಮಾತನಾಡಿ, ಯುವಕರ ವರ್ತನೆಯಲ್ಲಿ ಪರಿವರ್ತನೆ ತಂದು ಅವರ ವ್ಯಕ್ತಿತ್ವ ನಿಮಾಣ ಮಾಡುವುದರಲ್ಲಿ ಶರಣ ಸಾಹಿತ್ಯವು ಮಹತ್ತರವಾದ ಕಾರ್ಯನಿರ್ವಹಿಸುತ್ತದೆ ಎಂದರು.

ಶಸಾಪ ತಾಲೂಕು ಅಧ್ಯಕ್ಷ ಮಲ್ಲಪ್ಪ ರಾಮಗೇರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಾರುತಿ ಶಿಡ್ಲಾಪುರ, ಸಿ.ಡಿ. ಯತ್ನಳ್ಳಿ, ಎಫ್.ಸಿ. ಪಾಟೀಲ, ಕೆ.ಬಿ. ಚನ್ನಪ್ಪ, ಎಂ.ಬಿ. ಹಳಮನಿ, ಉಷಾ ಪಾಟೀಲ, ಬಿ.ಐ. ಅಂಗಡಿ, ಶಸಾಪ ಸದಸ್ಯರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net