

ಶಿಗ್ಗಾಂವಿ: ಮಹಾತ್ಮ ಗಾಂಧೀಜಿ ಅವರ ಚಿಂತನೆ, ಆದರ್ಶ, ಜೀವನ ಮೌಲ್ಯಗಳನ್ನು ಸ್ಮರಿಸುವುದರ ಜತೆಗೆ ಅವರ ಆದರ್ಶಗಳನ್ನು ಜೀವನದಲ್ಲಿ ಪ್ರತಿಯೊಬ್ಬರೂ ಪಾಲಿಸುವ ಅಗತ್ಯವಿದೆ ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಭುಲಿಂಗಪ್ಪ ಆಜೂರ, ಗುರುನಗೌಡ ಪಾಟೀಲ ಮಾತನಾಡಿದರು. ಬಳಿಕ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು- ಹಾಲು ವಿತರಿಸಿದರು.
ಮಲ್ಲಿಕಾರ್ಜುನಗೌಡ ಪಾಟೀಲ, ಮಹೇಶ ವಾಲ್ಮೀಕಿ, ಶಿವಪ್ಪ ವಡ್ಡರ, ಅಣ್ಣಪ್ಪ ಲಮಾಣಿ, ಎಸ್.ಎಫ್. ಮಣಕಟ್ಟಿ, ಸೋಮಣ್ಣ ಶಿಗ್ಗಾಂವ, ಅನಸೂಯಾ ಬಳಿಗಾರ, ಶಂಕ್ರಪ್ಪ ಮಡಿವಾಳರ, ಬಸಪ್ಪ ಗೋಗಿ, ಶಿವಪ್ಪ ಮಾದರ, ಈರಣ್ಣ ಬಡ್ಡಿ, ಬಸಪ್ಪ ಕಡೇಮನಿ, ರುದ್ರೇಶ ಗುಡಗೇರಿ, ಹನಮಂತಪ್ಪ ಬಂಡಿವಡ್ಡರ, ನಿಂಗಪ್ಪ ಓಲೇಕಾರ, ಮಂಜಪ್ಪ ಕಂಕಣವಾಡ, ಓಂಪ್ರಕಾಶ ಅಂಗಡಿ, ಮಂಜುನಾಥ ಯಲಿಗಾರ, ಸುರೇಶ ಕೆಂಚಮ್ಮನವರ, ಆಂಜನೇಯ ಗುಡಗೇರಿ, ನೂರ್‌ಅಹ್ಮದ ಡೋರಲ್ಲಿ, ಶಂಭು ಕತ್ತಿ, ಬಿ.ಜಿ. ರಾಗಿ, ಫಯಾಜ್ ಸವಣೂರ, ಸಾಹಿಲ್ ಕಮಡೊಳ್ಳಿ ಇತರರಿದ್ದರು.