ದೇಶದ ಬೆಳವಣಿಗೆಗೆ ಜೆಸಿಐ ಕೊಡುಗೆ ಅಪಾರ

16-SAVANUR- JCI
Published on

ಶಿಗ್ಗಾಂವಿ: ಜೆಸಿಐ ಸಂಸ್ಥೆ ಸಮಾಜಮುಖಿ ಕಾರ್ಯಗಳ ಮೂಲಕ ದೇಶದ ಬೆಳವಣಿಗೆಯಲ್ಲಿ ತನ್ನದೇಯಾದ ಪ್ರಮುಖ ಕೊಡುಗೆ ನೀಡುತ್ತಿದೆ ಎಂದು ಸಾರ್ವಜನಿಕ ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿ ಡಾ. ಹನುಮಂತಪ್ಪ ಪಿ.ಎಚ್. ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜೆಸಿಐ ಜೈತ್ರಾ ಸಪ್ತಾಹದ ಮುಕ್ತಾಯ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವ್ಯಕ್ತಿತ್ವ ವಿಕಸನದ ಜತೆಗೆ ಸದೃಢ ಯುವ ಸಂಪನ್ಮೂಲವನ್ನು ಜೆಸಿಐ ಸಂಸ್ಥೆ ರೂಪಿಸುತ್ತದೆ. ಪ್ರತಿಯೊಂದು ವಿಚಾರದಲ್ಲಿ ಲಾಭ-ನಷ್ಟದ ಲೆಕ್ಕಾಚಾರ ಮಾಡುವ ಕಾಲದಲ್ಲಿ ಸೇವೆ ಮಾಡುವ ಮನೋಭಾವ ಕಡಿಮೆ ಇರುತ್ತದೆ. ಆದರೆ, ಜೆಸಿಐ ಸಂಸ್ಥೆಯ ನಿಸ್ವಾರ್ಥ ಸಮಾಜಸೇವೆ ಶ್ಲಾಘನೀಯವಾಗಿದೆ ಎಂದರು.
ಜೆಸಿಐ ಶಿಗ್ಗಾಂವಿ ಘಟಕದ ಅಧ್ಯಕ್ಷೆ ಅನಿತಾ ಗೊಬ್ಬರಗುಂಪಿ ಮಾತನಾಡಿ, ಏಳು ದಿನಗಳ ಸಪ್ತಾಹ ಕಾರ್ಯಕ್ರಮದಲ್ಲಿ ನಿರಂತರ ಸಮಾಜಮುಖಿ ಕೆಲಸ ಮಾಡಿದ ಫಲವಾಗಿ ರಾಷ್ಟ್ರಮಟ್ಟದಲ್ಲಿ ಪ್ರಶಂಸೆಗೆ ಪಾತ್ರರಾಗಲು ಎಲ್ಲರ ಶ್ರಮವೇ ಕಾರಣ ಎಂದರು.
ಸ್ತೀ ಶಕ್ತಿ ಸಂಘದ ಒಕ್ಕೂಟದ ಅಧ್ಯಕ್ಷೆ ಸುಶೀಲಕ್ಕ ಪಾಟೀಲ, ಕುಮಾರ ಲಮಾಣಿ, ಹರೀಶ ಬಂಡಿವಡ್ಡರ, ರಾಘವೇಂದ್ರ ಬೇವಿನಮರದ ಮಾತನಾಡಿದರು. ಅತ್ಯುತ್ತಮ ಶಿಕ್ಷಕರು ಮತ್ತು ಉತ್ತಮ ಸಮಾಜ ಸೇವಕರನ್ನು ಜೆಸಿಐ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ಡಾ. ಡಿ.ಎ. ಗೊಬ್ಬರಗುಂಪಿ, ಡಾ. ಕುಮಾರಗೌಡ ಪಾಟೀಲ, ಜಿ.ಎನ್. ಯಲಿಗಾರ, ಮಹಾಂತೇಶ ಬಳಿಗಾರ, ರಾಘವೇಂದ್ರ ದೇಶಪಾಂಡೆ, ಡಾ. ಜಿ.ಎನ್. ನಿಡಗುಂದಿ, ಡಾ. ಲತಾ ನಿಡಗುಂದಿ, ಬಾಬಾಜಾನ ಹುಲಗೂರ, ಪ್ರಕಾಶ ಔಂದಕರ, ಡಿ.ಎ. ತೊಟಗೇರ, ಚಂದ್ರಿಕಾ ಪಾಟೀಲ, ಹರೀಶ ಬಂಡಿವಡ್ಡರ, ಗುರುರಾಜ ಹುಚ್ಚಣ್ಣವರ, ರೇಣುಕಾ ಹುಡೇದಗೌಡ್ರ, ಜಗದೀಶ ಹುಲ್ಲೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net