ಚಂದ್ರಯಾನ ಯಶಸ್ಸಿಗಾಗಿ ಹಿಂದು- ಮುಸ್ಲಿಮರಿಂದ ಪ್ರಾರ್ಥನೆ

23 HVR 6 B
Published on

ಶಿಗ್ಗಾಂವಿ: ಚಂದ್ರಯಾನ- 3 ಯಶಸ್ವಿಯಾಗಲಿ ಹಾಗೂ ಉತ್ತಮ ಮಳೆ ಸುರಿಯಲಿ ಎಂದು ಪ್ರಾರ್ಥಿಸಿ ಶಿಗ್ಗಾಂವಿಯ ಶಿರಡಿ ಸಾಯಿ ಮಂದಿರದಲ್ಲಿ ಬುಧವಾರ ಮಾಜಿ ಶಾಸಕ ಅಜೀಮ್‌ಪೀರ್ ಖಾದ್ರಿ ಅಭಿಮಾನಿ ಬಳಗದ ವತಿಯಿಂದ ಹಿಂದು- ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಾಜಿ ಶಾಸಕ ಅಜೀಮ್‌ಪೀರ್ ಖಾದ್ರಿ, ಸವಣೂರ ಪುರಸಭೆ ಮಾಜಿ ಅಧ್ಯಕ್ಷ ಖಲಂದರ ಗೌಡಗೇರಿ, ಶಿಗ್ಗಾಂವಿ ಪುರಸಭೆ ಸದಸ್ಯೆ ವಸಂತ ಬಾಗೂರು, ಶಂಭು ನರ್ತಿ, ಅಣ್ಣಪ್ಪ ನಡಟ್ಟಿ, ಬಾಬಾ ಸರೀನ್, ಅಣ್ಣಪ್ಪ ಲಮಾಣಿ, ಹುಸೇನಸಾಬ ಕಡೇಮನಿ, ಮಹಾಲಿಂಗಪ್ಪ ಕುಂಬಾರ, ಭೀರೇಶ ಜಟ್ಟೆಪ್ಪನವರ, ಇತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net