

ಶಿಗ್ಗಾಂವಿ: ಸಮಾಜದಲ್ಲಿ ಇಂಜಿನಿಯರ್ಗಳು ಹೆಚ್ಚಿನ ಜವಾಬ್ದಾರಿ ಹೊಂದಿದ್ದಾರೆ. ಯಾವುದೇ ನೈಸರ್ಗಿಕ ಮತ್ತು ಮಾನವ ನಿರ್ವಿುತ ವಿಪತ್ತುಗಳನ್ನು ತಡೆದುಕೊಳ್ಳಬಲ್ಲ ಕಟ್ಟಡಗಳ ನಿರ್ವಣದಲ್ಲಿ ಸಿವಿಲ್ ಇಂಜಿನಿಯರ್ಗಳ ಪಾತ್ರ ಮಹತ್ವದ್ದಾಗಿದೆ ಎಂದು ಶಿಗ್ಗಾಂವಿ-ಸವಣೂರ ತಾಲೂಕಿನ ಸಿವಿಲ್ ಇಂಜಿನಿಯರಿಂಗ್ ಅಸೋಸಿಯೇಟ್ ಗೌರವಾಧ್ಯಕ್ಷ ಎನ್.ಬಿ. ಕಟಗಿ ಹೇಳಿದರು.
ಪಟ್ಟಣದ ಹನುಮಂತಗೌಡ್ರು ಪಾಟೀಲ ಕಂಫರ್ಟ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಶಿಗ್ಗಾಂವಿ-ಸವಣೂರ ತಾಲೂಕಿನ ಸಿವಿಲ್ ಇಂಜಿನಿಯರಿಂಗ್ ಅಸೋಸಿಯೇಟ್ ಉದ್ಘಾಟನಾ ಸಮಾರಂಭ ಹಾಗೂ ಇಂಜಿನಿಯರರ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬ ಇಂಜಿನಿಯರ್ಗಳು ಗ್ರಾಹಕರು, ಜನರ ನಂಬಿಕೆ ಉಳಿಸಿಕೊಳ್ಳಲು ಪ್ರಾಮಾಣಿಕ ಸೇವೆ ಸಲ್ಲಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಸೋಸಿಯೇಟ್ ಅಧ್ಯಕ್ಷ ಸಿ.ಬಿ. ಕಂಬಾಳಿಮಠ ಮಾತನಾಡಿ, ವಿಶ್ವೇಶ್ವರಯ್ಯನವರು ನಾಡು ಕಂಡ ಶ್ರೇಷ್ಠ ಇಂಜಿನಿಯರ್. ಅವರ ಆದರ್ಶ, ಗುಣಗಳು ನಮಗೆಲ್ಲ ಮಾರ್ಗದರ್ಶನ. ಸಮಯ ಪಾಲನೆ, ಸರಳ ಜೀವನಶೈಲಿ ನಮಗೆಲ್ಲ ಸ್ಪೂರ್ತಿದಾಯಕವಾಗಬೇಕು ಎಂದರು.
ಶಿಗ್ಗಾಂವಿ-ಸವಣೂರು ಎರಡೂ ತಾಲೂಕಿನ ಎಲ್ಲ ಇಂಜಿನಿಯರ್ಗಳ ಸಹಕಾರ, ಬೆಂಬಲದಿಂದ ನೂತನ ಸಂಘ ರಚಿಸಲಾಗಿದೆ. ಸಾಕಷ್ಟು ಜನರು ಇಂಜಿನಿಯರ್ಗಳ ಮೇಲೆ ಅಪಾರ ನಂಬಿಕೆ ಇಟ್ಟು ಕೆಲಸ ವಹಿಸಿರುತ್ತಾರೆ. ಅವರ ನಂಬಿಕೆಗೆ ಅನುಗುಣವಾಗಿ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕು ಎಂದು ಮನವಿ ಮಾಡಿದರು.
ಇಂಜಿನಿಯರಿಂಗ್ ಕ್ಷೇತ್ರಕ್ಕೆ ಅಪಾರ ಕೊಡುಗೆ ಸಲ್ಲಿಸಿರುವ ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯನವರ ಜನ್ಮದಿನವನ್ನು ಸರ್ಕಾರದ ಮಟ್ಟದಲ್ಲಿ ಕಡ್ಡಾಯವಾಗಿ ಆಚರಿಸಲು ಸರ್ಕಾರಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.
ಅಸೋಸಿಯೇಟ್ ಗೌರವಾಧ್ಯಕ್ಷ ಎನ್.ಬಿ. ಕಟಗಿ ಮತ್ತು ಅಧ್ಯಕ್ಷ ಸಿ.ಬಿ. ಕಂಬಾಳಿಮಠ ಅವರನ್ನು ತಾಲೂಕು ಅಸೋಸಿಯೇಟ್ ವತಿಯಿಂದ ಸನ್ಮಾನಿಸಲಾಯಿತು. ವಿರಕ್ತಮಠದ ಸಂಗನಬಸವ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಹಾಂತೇಶ ಕಂಬಾಳಿಮಠ, ಆರ್.ಎನ್. ಕಮ್ಮಾರ ಮಾತನಾಡಿದರು.
ಸಿವಿಲ್ ಇಂಜಿನಿಯರಿಂಗ್ ಅಸೋಸಿಯೇಟ್ ಉಪಾಧ್ಯಕ್ಷ ಜಿ. ಶಾನ್ಖಾನ್ ನಾಗಡ, ರವಿಕಿರಣ ಮೂಲಿಮನಿ, ನಂದೀಶ ಬಾಣದ, ಸಿದ್ದಲಿಂಗೇಶ್ವರ ಹೆಸರೂರ, ಫಯಾಜ್ ಕಿಲ್ಲೆದಾರ, ಬಸವರಾಜ ಬಡ್ಡಿ, ನಿರಂಜನ ಹಿರೇಮಠ, ಗುರುರಾಜ ಹೊನ್ನಣ್ಣನವರ, ಅಬ್ದುಲ್ಸಮದ್ ಎ.ಪಿ., ಮಲಿಖಾನ್ ರಮಡೆದ, ಶೇರ್ ಅಲಿ, ಮಹಮ್ಮದ್ ಇಸಾಕ್ ಲೋಹಾರ, ಪ್ರಕಾಶ ಎಲಿಗಾರ, ಜೀವಿ ಪಾಟೀಲ, ಅದನಖಾನ ನಗಾಡ, ತವಲಕ್ಕಲ ಪಿ., ಎಂ.ಎಸ್. ಕಾಕಡ, ರುದ್ರಗೌಡ ಪಾಟೀಲ, ಎಂ.ಎಂ. ಖತೀಬ್, ವಿಶ್ವನಾಥ್ ಮಟ್ಟಿ, ಎಸ್.ಎಸ್. ಬಾವಿ, ಇತರರಿದ್ದರು. ಸುಮಿತ ಬಿಜ್ಜೂರ ಹಾಗೂ ಕಿರಣ ತೆಗ್ಗಿಹಳ್ಳಿ ನಿರ್ವಹಿಸಿದರು.