ಉತ್ತಮ ಆರೋಗ್ಯಕ್ಕೆ ಸೈಕಲ್ ಬಳಕೆ ಸಹಕಾರಿ

16-SGN-2 CYCLE
Published on

ಶಿಗ್ಗಾಂವಿ: ಪರಿಸರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು, ಸ್ವಚ್ಛ ಗಾಳಿ ಮತ್ತು ಪರಿಸರ ರಕ್ಷಣೆಗೆ ಸೈಕಲ್ ಬಳಕೆ ಸಹಕಾರಿಯಾಗಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಶಿವಾನಂದ ದೊಡ್ಡಮನಿ ಹೇಳಿದರು.

ತಾಲೂಕಿನ ಕುನ್ನೂರು ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಓಣಿಯಲ್ಲಿ ಗೆಳೆಯರ ಬಳಗದಿಂದ ಬಾಲಕರಿಗಾಗಿ ಬುಧವಾರ ಆಯೋಜಿಸಿದ್ದ ಚಿಣ್ಣರ ಸೈಕಲ್ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.

ಇಂದು ಯಂತ್ರೋಪಕರಣಗಳ ವಿಪರೀತ ಬಳಕೆಯಿಂದಾಗಿ ಪರಿಸರ ಮಾಲಿನ್ಯ ಹೆಚ್ಚಾಗಿದೆ. ಇವುಗಳಿಂದ ಹೊರಸೂಸುವ ಹೊಗೆಯು ಹವಾಮಾನದ ಅಸಮತೋಲನಕ್ಕೆ ಕಾರಣವಾಗುತ್ತಿದೆ. ಸೈಕಲ್ ಬಳಕೆ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು ಎಂದರು.

ಸೋಮಯ್ಯ ಹಿರೇಮಠ, ಯಲ್ಲಪ್ಪ ಶ್ಯಾಡಂಬಿ, ಹನುಮಂತಪ್ಪ ಮುದಕಪ್ಪನವರ, ಮೈಲಾರಪ್ಪ ಮಮದಾಪುರ, ನಿಂಗಪ್ಪ ಮಾದರ, ಅಶೋಕ ಮರಿಸಿದ್ದಣ್ಣವರ, ರಾಮಣ್ಣ ಮತ್ತಿಗಟ್ಟಿ, ಮೈಲಾರಪ್ಪ ಇಂದೂರ, ಈರಣ್ಣ ಮಾಳೋಜನವರ, ಮಹಾದೇವಪ್ಪ ಬಸರಿಕಟ್ಟಿ, ಗುಲಾಬ ಕಿಲ್ಲೇದಾರ, ನಿಂಗಪ್ಪ ದೊಡ್ಡಮನಿ, ಯಲ್ಲಪ್ಪ ಭಜಂತ್ರಿ, ಅಲ್ಲಿಸಾಬ್ ಹಳ್ಯಾಳ, ವಾಹಿದ್ ಕುರಟ್ಟಿ, ಹಾರುನ್ ಜಿಗಳೂರ, ಜೈಲಾನಿ ಮತ್ತೇಖಾನ, ಮಂಜುನಾಥ ಬಸರಿಕಟ್ಟಿ, ಗ್ರಾಮದ ಯುವಕರು, ಕ್ರೀಡಾಭಿಮಾನಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net