ಅಂಧ ಕ್ರೀಡಾಪಟುಗಳಿಗೆ 25 ಲಕ್ಷ ರೂ. ಪ್ರೋತ್ಸಾಹಧನ ನೀಡಿ

13-SGN-2 SNAMAM
Published on

ಶಿಗ್ಗಾಂವಿ: ದೈಹಿಕವಾಗಿ ಸದೃಢವಾಗಿದ್ದರೂ ಸಾಧನೆ ಮಾಡಲು ಹಿಂಜರಿಯುವವರಿದ್ದಾರೆ. ಅಂಧತ್ವವನ್ನು ಮೆಟ್ಟಿ ನಿಂತ ರಾಜ್ಯದ ಮೂವರು ಯುವತಿಯರು ಭಾರತದ ಅಂಧ ಮಹಿಳೆಯರ ಕ್ರಿಕೆಟ್ ತಂಡ ಪ್ರತಿನಿಧಿಸಿ ಇಂಗ್ಲೆಂಡ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸಿ ಚಿನ್ನದ ಪದಕ ಪಡೆದಿರುವುದು ದೊಡ್ಡ ಸಾಧನೆ ಎಂದು ಹಿರಿಯೂರಿನ ಆದಿಜಾಂಬವ ಕೋಡಿಹಳ್ಳಿ ಬೃಹನ್ಮಠದ ಷಡಕ್ಷರಿ ಮುನಿಶ್ರೀ ಹೇಳಿದರು.
ತಾಲೂಕಿನ ಶಿಶುನಾಳ ಗ್ರಾಮದಲ್ಲಿ ಮಹಿಳಾ ಅಂಧರ ತಂಡವನ್ನು ಪ್ರತಿನಿಧಿಸಿರುವ ಗಂಗವ್ವ ನೀಲಪ್ಪ ಹರಿಜನ ಅವರನ್ನು ಮಂಗಳವಾರ ಸನ್ಮಾನಿಸಿ ಅವರು ಮಾತನಾಡಿದರು.
ಭಾರತ ತಂಡ ಪ್ರತಿನಿಧಿಸಿರುವ ಶಿಶುನಾಳದ ಗಂಗಮ್ಮ, ಹಿರಿಯೂರಿನ ವರ್ಷ, ಶಿರಾದ ದೀಪಿಕಾ ಅವರು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಇವರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ತಲಾ 25 ಲಕ್ಷ ರೂ. ಆರ್ಥಿಕ ನೆರವು ಘೋಷಿಸಬೇಕು. ಬೆಂಗಳೂರಲ್ಲಿ ಇವರಿಗೆ ಮನೆ ನೀಡಬೇಕು. ಇವರ ಓದಿಗ ತಕ್ಕ ಸರ್ಕಾರಿ ನೌಕರಿ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಈಗಾಗಲೇ ಒಡಿಶಾ ಸರ್ಕಾರ ಭಾರತವನ್ನು ಪ್ರತಿನಿಧಿಸಿದ ಆ ರಾಜ್ಯದ ಕ್ರೀಡಾಪಟುಗಳಿಗೆ 20 ಲಕ್ಷ ರೂ. ಆರ್ಥಿಕ ನೆರವು ನೀಡಿದೆ. ರಾಜ್ಯ ಸರ್ಕಾರ ಕೂಡ ಮಕ್ಕಳ ಸಾಧನೆ ಪರಿಗಣಿಸಿ ಆರ್ಥಿಕ ನೆರವು ನೀಡಬೇಕು. ಅವರಿಗೆ ತರಬೇತಿ ನೀಡುವ ಮೂಲಕ ಅಂಧರ ಕ್ರಿಕಟ್‌ಗೆ ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದರು.
ಬಸವರಾಜ ಹೆಡಿಗೊಂಡ, ಎಸ್.ಜಿ. ಹೊನ್ನಪ್ಪನವರ, ಡಾ. ಮಲ್ಲೇಶಪ್ಪ ಹರಿಜನ, ಮಾಲತೇಶ ಯಲ್ಲಾಪುರ, ಕರಿಯಪ್ಪ ಕಟ್ಟಿಮನಿ, ಭೀಮಣ್ಣ ಹೊಟ್ಟೂರ, ಶಿವಾನಂದ ಮಾದರ, ಸುರೇಶ ಮಾದರ, ಹನುಮಂತಪ್ಪ ಮಾದರ, ಏಳುಕೋಟೆಪ್ಪ ಪಾಟೀಲ, ಮರಿಯಪ್ಪ ನಡುವಿಮನಿ, ಅಜ್ಜಯ್ಯ ಮರಿಯಣ್ಣನವರ, ಅಜ್ಜಯ್ಯ ಆರಿಕಟ್ಟಿ, ಪುಟ್ಟಪ್ಪ ಕೋಟಿಹಾಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net