ರಸ್ತೆ ದಾಟುವಾಗ ಕಾರು ಡಿಕ್ಕಿ; ಮಹಿಳೆ ಸಾವು

Published on

ಶಿಗ್ಗಾಂವಿ: ಮಹಿಳೆಯೊಬ್ಬಳು ರಸ್ತೆ ದಾಟುತ್ತಿದ್ದ ಸಮಯದಲ್ಲಿ ಯಾವುದೋ ಕಾರು ಡಿಕ್ಕಿಯಾಗಿ ಮಹಿಳೆ ಮೃತಪಟ್ಟ ಘಟನೆ ಪಟ್ಟಣದ ಪ್ರವಾಸಿ ಮಂದಿರದ ಬಳಿ ಬುಧವಾರ ಸಂಭವಿಸಿದೆ.
ತಾಲೂಕಿನ ಕುಂದೂರ ಗ್ರಾಮದ ರತ್ನವ್ವ ಸಂಕಪ್ಪ ಸಂಶಿ (47) ಮೃತ ಮಹಿಳೆ.
ಈಕೆ ಪ್ರವಾಸಿ ಮಂದಿರದ ಬಳಿ ಎನ್‌ಎಚ್-48ರಲ್ಲಿ ರಸ್ತೆ ದಾಟುತ್ತಿದ್ದ ಸಮಯದಲ್ಲಿ ಕಾರೊಂದು ಡಿಕ್ಕಿ ಹೊಡೆದಿದೆ. ಇದರಿಂದಾಗಿ ಸ್ಥಳದಲ್ಲಿಯೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಈ ಕುರಿತು ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net